ಆಧ್ಯಾತ್ಮಿಕತೆಯಿಂದ ಬದುಕು ನೆಮ್ಮದಿ : ರಾಮಚಂದ್ರ ಮೋನೆ

Advindra Math
Published on

ಗದಗ: ಶ್ರಾವಣ ಮಾಸವು ಸಂಭ್ರಮ ಸಡಗರದ ಕಾಲ. ಮನುಷ್ಯನು ಆಧ್ಯಾತ್ಮಿಕವಾಗಿ ಚಿಂತನೆಗೊAಡು ಮನ ಹಾಗೂ ಮನಸ್ಸನ್ನು ದೇವರ ಧ್ಯಾನದಲ್ಲಿ ಕಳೆಯುವ ಒಳ್ಳೆಯ ಸಮಯವಾಗಿದ್ದು ಜೀವನದ ನೆಮ್ಮದಿಗೆ, ಸಮಸ್ಯೆಗಳಿಗೆ ಆಧ್ಯಾತ್ಮವೊಂದೆ ಪರಿಹಾರ ಒದಗಿಸಬಲ್ಲದು ಎಂದು ನಿವೃತ್ತ ವಿಜ್ಞಾನ ಶಿಕ್ಷಕ ರಾಮಚಂದ್ರ ಮೋನೆ ಹೇಳಿದರು.

ಅವರು ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ನಡೆದ 338ನೇ ಮಾಸಿಕ ಶಿವಾನುಭವ ‘ಶ್ರಾವಣ ಸಂಜೆ’ ಗೋಷ್ಠಿಯಲ್ಲಿ ಆಧ್ಯಾತ್ಮಿಕತೆ ಹಾಗೂ ನಾವು ವಿಷಯವಾಗಿ ಮಾತನಾಡಿದರು.

ಆಧ್ಯಾತ್ಮ ಎಂದರೆ ನಮ್ಮನ್ನು ನಾವು ತಿಳಿದುಕೊಳ್ಳುವದು. ಮಾಡುವ ಕಾಯಕದಲ್ಲಿ ನಂಬಿಕೆ ಇಟ್ಟು ಅದನ್ನೆ ದೇವರೆಂದು ತಿಳಿದು ಮೌಲ್ಯಯುತವಾಗಿ ಜೀವನ ನಡೆಸಬೇಕು. ಜೀವನದ ಪ್ರತಿಯೊಂದು ಘಳಿಗೆನ್ನು ಅರ್ಥಪೂರ್ಣವಾಗಿ ಕಳೆಯುವಲ್ಲಿ ಆಧ್ಯಾತ್ಮ ನಮಗೆ ದಾರಿ ತೋರಿಸುತ್ತದೆ. ಪರಸ್ಪರ ಗೌರವ, ಸಹಕಾರ, ವಾತ್ಸಲ್ಯಗಳೆ ನಮ್ಮ ಜೊತೆಗಿರಬೇಕು. ಎಲ್ಲ ಧರ್ಮಗಳ ಸಾರವನ್ನು ತಿಳಿದು ಆಧ್ಯಾತ್ಮದ ಜ್ಯೋತಿ ಬೆಳಗಿದಾಗ ಸಮಾಜದಲ್ಲಿ ನಾವು ಸಲ್ಲಿಸುವ ಸೇವೆ ಗುರುತಿಸಲ್ಪಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಚಾರ್ಯ ಜಿ.ವ್ಹಿ.ಹಂಪಣ್ಣವರ ಮಾತನಾಡಿ ಮಠ ಮಾನ್ಯಗಳು ಧಾರ್ಮಿಕ ನೆಲೆಗಟ್ಟನ್ನು ಕಟ್ಟಿಕೊಡುವ ಶೃದ್ಧಾ ಕೇಂದ್ರಗಳು. ಗದಗ ಪರಿಸರದಲ್ಲಿ ಅಡವೀಂದ್ರ ಮಠವು ಮಾಸಿಕ ಶಿವಾನುಭವದ ಮೂಲಕ ಭಕ್ತರಲ್ಲಿ ಧರ್ಮ ಜಾಗೃತಿ ಮಾಡುತ್ತಿದೆ ಎಂದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿAದ ‘ವಾಣಿಜ್ಯ ರತ್ನ’ ಪ್ರಶಸ್ತಿ ಪಡೆದುಕೊಂಡ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹಾಗೂ ಪ್ರಾಚಾರ್ಯ ಜಿ.ವ್ಹಿ.ಹಂಪಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮ್ಮುಖವನ್ನು ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿ ವ್ಯಕ್ತಿಗಳು ಶಕ್ತಿಗಳಾಗಲು ಧರ್ಮದ ರಕ್ಷಣೆ ಬೇಕು. ಧರ್ಮವು ನಮ್ಮನ್ನು ಸುಜ್ಞಾನಿಗಳನ್ನಾಗಿ ಮಾಡುತ್ತದೆ. ಧರ್ಮದ ಮಾರ್ಗದಲ್ಲಿ ನಡೆದರೆ ಎಂದಿಗೂ ಸೋಲು ಇಲ್ಲ. ಮನುಷ್ಯನಿಗೂ ಧರ್ಮಕ್ಕೂ ಅವಿನಾಭಾವ ಸಂಬAಧವಿದ್ದು ಮಠಗಳು ಸೇತುವೆಗಳಾಗಿ ಭಕ್ತರನ್ನು ಸನ್ಮಾರ್ಗದತ್ತ ಮುನ್ನಡೆಸುತ್ತದೆ ಎಂದರು.

ಅಧ್ಯಕ್ಷತೆಯನ್ನು ಶಿವಾನುಭ ಸಮಿತಿಯ ಅಧ್ಯಕ್ಷ ಡಾ.ಎಸ್.ಕೆ.ನಾಲತ್ವಾಡಮಠ ವಹಿಸಿದ್ದರು. ಶ್ರೀಮತಿ ರತ್ನಮ್ಮ ಮಂಟೂರಮಠ ಮತ್ತು ಸಂಗಡಿಗರು ಪ್ರಾರ್ಥನೆ ಜರುಗಿತು, ಸಿದ್ದೇಶ ಜವಳಿ ಸ್ವಾಗತಿಸಿದರು ಪ್ರಕಾಶ ಬಂಡಿ ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಬಿ.ತೋಟಗೇರ, ಕಾರ್ಯದರ್ಶಿ ಪ್ರೊ.ಬಿ.ಬಿ.ಪಾಟೀಲ, ಸಾಂಸ್ಕೃತಿಕ ಕಾರ್ಯದರ್ಶಿ ವಿನಾಯಕ ಸಜ್ಜನ, ಕೋಶಾಧ್ಯಕ್ಷ ಯು.ಆರ್.ಭೂಸನೂರಮಠ ಉಪಸ್ಥಿತರಿದ್ದರು.

ಭಕ್ತಿ ಸೇವೆಯನ್ನು ಪಿ.ಸಿ.ಪುರಾಣಿಕಮಠ, ಶರಣಬಸಪ್ಪ ಗುಡಿಮನಿ, ರವೀಂದ್ರ ಮಾಶಾಳ, ಎಸ್.ಎಂ.ಮಾಶಾಳ ವಹಿಸಿದ್ದರು. ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net