ಧರ್ಮವಂತರಾಗಿ, ಧರ್ಮದ ಹಾದಿಯಲ್ಲಿ ಮುನ್ನಡೆಯಿರಿ

1
Published on

ಗದಗ: ಎಲ್ಲರೂ ಧರ್ಮವಂತರಾಗಿ, ಧರ್ಮದ ಹಾದಿಯಲ್ಲಿ ಮುನ್ನಡೆಯಿರಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿ ಎಂದು ನರಗುಂದದ ಸಿದ್ದೇಶ್ವರ ಪಂಚಗ್ರಹಗುಡ್ಡ ಹಿರೇಮಠದ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಮಂಗಳವಾರ ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ಜರುಗಿದ ದಸರಾ ಮಹೋತ್ಸವದ ಶ್ರೀದೇವಿ ಪುರಾಣ, ಅನ್ನಪೂರ್ಣೆಶ್ವರಿದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಪುರಾಣ ಪ್ರವಚನಗಳನ್ನು ಕೇಳುವುದರಿಂದ ಮನಸ್ಸು ಪ್ರಸನ್ನತೆಗೊಳ್ಳುವದು, ಸದ್ಗುಣಗಳು ಮೂಡುವವು ಎಂದರಲ್ಲದೆ ನಾವಿಂದು ವೈಚಾರಿಕ ಚಿಂತನೆಗಳನ್ನು ಮಾಡಬೇಕು. ಪರಿಸರ ಸಂರಕ್ಷಣೆ, ನೀರು ಮಿತ ಬಳಕೆ ಮಾಡಬೇಕಲ್ಲದೆ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ಜಲ, ಸೌರ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು.
ಸಾಧಕ ಮಹನೀಯರನ್ನು ಸನ್ಮಾನಿಸುವದು ಯುವ ಪೀಳಿಗೆಗೆ ಸ್ಪೂರ್ತಿ-ಮಾದರಿ ಆಗಲೆಂದು ಜೊತೆಗೆ ಸಾಧಕರಿಗೆ ಪ್ರೋತ್ಸಾಹ ಕೃತಜ್ಞತೆ ಸಲ್ಲಿಸುವದಾಗಿದೆ, ಯುವಕರು ಹಿರಿಯರನ್ನು ಅನುಸರಿಸಬೇಕು ಸಾಧಕರನ್ನು ನೋಡಿ ತಾವು ಆ ರೀತಿಯ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರುವದನ್ನು ಕಲಿಯಬೇಕೆಂದರು.
ಸಮಾರAಭದಲ್ಲಿ ಸಹಕಾರ ಇಲಾಖೆಯ ವಿಶ್ರಾಂತ ಸಹಾಯಕ ನಿಬಂಧಕ ಬಿ.ಎಂ.ಬಿಳೇಯಲಿ ಅವರಿಗೆ ‘ಸಮಾಜ ಸೇವಾ ರತ್ನ’ ಗದುಗಿನ ಶಿವಾನಂದ ಯೋಗ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ಹಿರೇಮಠ ಅವರಿಗೆ ‘ಯೋಗ ಸಾಧನಾ ರತ್ನ’, ರೋಣದ ಗಣ್ಯ ಉದ್ಯಮಿದಾರ ಶಿವಣ್ಣ ಪಲ್ಲೇದ ಅವರಿಗೆ ‘ಶ್ರೇಷ್ಠ ಉದ್ಯಮಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮ್ಮುಖವನ್ನು ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ವಹಿಸಿದ್ದರು. ವೇದಿಕೆಯ ಮೇಲೆ ಜಾತ್ರಾ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ, ಮಹಿಳಾ ಸಮಿತಿಯ ಅಧ್ಯಕ್ಷೆ ಲೀಲಾವತಿ ಬಿಳೇಯಲಿ ಉಪಸ್ಥಿತರಿದ್ದರು. ಡಾ.ರಾಜಗುರು ಗುರುಸ್ವಾಮಿ ಕಲಕೇರಿ, ಚನ್ನಬಸಯ್ಯ ಹೇಮಗಿರಿಮಠ ಅವರಿಂದ ಪುರಾಣ ಪ್ರವಚನ ಜರುಗಿತು.
ಅಪಾರ ಶಕ್ತಿಯುಳ್ಳ ಮಹಿಷಾಸೂರ ಯಾರಿಂದಲೂ ಹತನಾಗದಿರುವ ವರ ಬ್ರಹಃದೇವನಿಂದ ಪಡೆದಿದ್ದರೂ ತನ್ನ ಅಪರಿಮಿತ ಪರಾಕ್ರಮ ಶಕ್ತಿಯನ್ನು ಶುಂಭ ನಿಶುಂಭರ ಜೊತೆಗೂಡಿ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡದ್ದರಿAದ ಶ್ರೀದೇವಿ ಜೊತೆ ಯುದ್ದಮಾಡಿ ಪರಾಜಿತಗೊಂಡ ಸನ್ನಿವೇಶಗಳನ್ನು ವಿವರಿಸಿ ನಾವು ನಮ್ಮಲ್ಲಿರುವ ಶಕ್ತಿಯನ್ನು ಸಮಾಜದ ಸದುದ್ದೇಶಕ್ಕೆ ಸದ್ಭಳಕೆ ಮಾಡಿದರೆ ನಮ್ಮ ಸ್ವತ್ತು ಆರೋಗ್ಯ ವೃದಿಯಾಗುತ್ತೆ ಹಾಗೂ ಮಾನಸಿಕ ನೆಮ್ಮದಿ ಪಡೆಯಬಹುದು ಎಂದು ಕಲಕೇರಿ ವಿವರಿಸಿದರು.
ಶ್ರೀದೇವಿಗೆ ಹಾಗೂ ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಜೆ.ವ್ಹಿ.ಹಿರೇಮಠ ಸ್ವಾಗತಿಸಿದರು ಮಂಗಲಾ ಯಾನಮಶೆಟ್ಟಿ, ಸುವರ್ಣಾ ಮದರಿಮಠ ನಿರೂಪಿಸಿದರು ಕೊನೆಗೆ ಶ್ರೀಮತಿ ಎಸ್.ಎಂ.ಕಾತರಕಿ ವಂದಿಸಿದರು.
= = =

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net