

ಗದಗ: ಸೋಮವಾರ ರಾತ್ರಿ ಪೊಲೀಸ್ ವಾಹನ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ನಿಖಿಲ್ ಗೌಡರ್(22) ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಭಾನುವಾರ ರಾತ್ರಿ ಚಿತ್ರನಟ ಯಶ್ ಅವರ ರ್ಬತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪಶಿರ್ಸಿ ನಡೆದ ಮೃತಪಟ್ಟಿದ್ದ ಅಭಿಮಾನಿಗಳ ಮನೆಗೆ ಸಮವಾರ ಯಶ್ ಭೇಟಿ ನೀಡಿದ್ದರು. ಈ ವೇಳೆ ಭದ್ರತೆಗಾಗಿ ನಿಯೋಜಿಸಿದ್ದ ಡಿಆರ್ ಪೊಲೀಸ್ ಸಿಬ್ಬಂದಿ ಇರುವ ವಾಹನ ಕರ್ತವ್ಯ ಮುಗಿಸಿ ಮರಳುವ ಸಂದರ್ಭದಲ್ಲಿ ನಿಖಿಲ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ನಿಖಿಲ್ ಗೆ ಗಂಭಿರ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿ ಆಗದೇ ಮಂಗಳವಾರ ಬೆಳಗ್ಗೆ ನಿಖಿಲ್ ಸಾವನ್ನಪ್ಪಿದ್ದಾರೆ.