ಅರಸರ ಪ್ರಾಚ್ಯಕಲಾ ಶಿಲ್ಪಗಳನ್ನು ರಸುವ ಹೊಣೆ ಯುವಪೀಳಿಗೆಯ ಮೇಲಿದೆ: ಪ್ರಾಚ್ಯ ಸಂಶೋಧಕ ಅ. ದ. ಕಟ್ಟಿಮನಿ

Published on

ಗದಗ: ಅರಸರ ಪ್ರಾಚ್ಯಕಲಾ ಶಿಲ್ಪಗಳನ್ನು ರಸುವ ಹೊಣೆ ಯುವಪೀಳಿಗೆಯ ಮೇಲಿದೆ ಎಂದು ಖ್ಯಾತ ಪ್ರಾಷ್ಯ ಸಂಶೋಧಕರ ಅ. ದ. ಕಟ್ಟಿಮನಿ ಹೇಳಿದರು.

ತಾಲೂಕಿನ ಬೆಳದಡಿ ಗ್ರಾಮದ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ಯವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ನಾಡಿನಲ್ಲಿ ಆಳಿದ ಅನೇಕ ಅರಸರು ತಮ್ಮ ಆಯಾ ಕಾಲಟ್ಟದಲ್ಲಿ ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆ ಅನೇಕ ಸಾಂಸತಿಕ ಕಲೆಗಳಿಗೆ ಮನ್ನಣೆ ನಿಡಿದ್ದಾರೆ. ಅನೇಕ ಸ್ಮಾರಕಗಳನ್ನು ನಿರ್ಮಾಣ ಮಾಡಿ ಅಚ್ಚಳಿಯದೇ ಮುಂದಿನ ಪೀಳಿಗೆಗೆ ನೆರವಾಗಲಿ ಎಂಬ ಉದ್ದೇಶದಿಂದ ಆಸ್ತಿಯನ್ನಾಗಿ ಮಾಡಿ ಸ್ಮರಣೀಯರಾಗಿದ್ದಾರೆ. ಅವರ ಪ್ರಾಚ್ಯ ಕಲಾ ಶಿಲ್ಪಗಳನ್ನು ರಸುವ ಹೊಣೆ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದು ಹೇಳಿದರು.

ಪ್ರೊ. ಕೆ. ಎಚ್​. ಬೇಲೂರ ಮಾತನಾಡಿ, ಮಕ್ಕಳು ರಾಷ್ಟ್ರೀಯ ಸ್ಮಾರಕಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ದೇಶದ ಇತಿಹಾಸವನ್ನು ಅರಿತುಕೊಳ್ಳುವುದು ಇಂದಿನ ಯುವ ಪೀಳಿಗೆಗೆ ಅವಶ್ಯವಾಗಿದೆ ಎಂದರು.

ಎಚ್​. ಟಿ. ಸಂಜೀವಸ್ವಾಮಿ ಮಾತನಾಡಿ, ಕನ್ನಡ ನಾಡನ್ನು ಆಳಿದ ಅರಸು ಮನೆತನಗಳಾದ ಹೊಯ್ಸಳ, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ವಿಜಯನಗರದ ಅರಸರು ತಮ್ಮ ಆಸಕ್ತಿಗೆ ಅನುಗುಣವಾಗಿ ಸ್ಮಾರಕಗಳನ್ನು ನಿಮಿರ್ಸಿದ್ದಾರೆ. ಅವುಗಳ ಬಗ್ಗೆ ಅರಿತುಕೊಂಡು ನಾಡುನುಡಿಯ ಸಾಂಸತಿಕ ನೆಲೆಗಟ್ಟನ್ನು ಶ್ರೀಮಂತಗೊಳಿಸುವುದು ಹಾಗೂ ಜಿಲ್ಲೆಯ ಪಾರಂಪರಿಕ ಸ್ಮಾರಕಗಳನ್ನು ಅಭ್ಯಸಿಸುವುದು ಅವಶ್ಯವಾಗಿದೆ ಎಂದು ಹೇಳಿದರು.

ವಿ. ಬಿ. ಶೇಷಗಿರಿ, ಎಸ್​.ಡಿ.ಹೊಸಳ್ಳಿ, ಶ್ರೀಕಾಂತ ಸಂಜೀವಸ್ವಾಮಿ, ಶಂಕರ ನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net