ಕಳಸಾಪೂರ ಬಸವಕೇಂದ್ರದಲ್ಲಿ 1508ನೇ ಶಿವಾನುಭವ

20GDG06
ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ಕುರಿತು ಗೋಷ್ಠಿಗಳು ಜರುಗಿದವು. ಮಲ್ಲಿಕಾರ್ಜುಜ ಖಂಡೆಮ್ಮನ್ನವರ, ಸುರೇಶ ಲಮಾಣಿ, ಮುಸ್ಕಾನ ಸಿಂದಗಿ, ಡಾ. ದಣಿಕುಮಾರ, ಶಿವಪ್ಪ ಹೂಗಾರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ ಇತ್ತಿಚೆಗೆ ಶಿವಾನುಭವ ಕಾರ್ಯಕ್ರಮ ಜರುಗಿತು. ಶಿವಾನುಭವಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜು ಖಂಡೆಮ್ಮನ್ನವರ, ಜೀವ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗಳಿಗೆ ಬೇಕಿರುವುದು ಬದುಕಿನ ಸಂತೃಪ್ತಿ. ಆ ಸಂತೃಪ್ತಿ ನಿಜವಾಗಿ ನೆಲೆಯಾಗಿರುವುದೇ ಜೀವಿಯ ಚಲನಶೀಲತೆಯಿಂದ. ಜೀವಿ ಮಾಡುವ ಕಾಯಕದಲ್ಲೇ ಸಂತೃಪ್ತಿ ಅಡಗಿದೆ. ಕಾಯಕದ ಬೆವರಿನಲ್ಲಿರುವುದೇ ನಿಜವಾದ ಸಂತೃಪ್ತಿ. ಈ ಬಗೆಯ ಸಂತೃಪ್ತಿಯೂ ಕೈಲಾಸಕ್ಕೆ ಸಮನಾಗಿರುತ್ತದೆ ಎಂದರು.
ಕೃಷ್ಣ ದುರಗಪ್ಪನವರ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ವಚನ ಸಾಹಿತ್ಯವು ಇಂದಿನ ಯುವಕರಿಗೆ ಅತೀ ಅವಶ್ಯಕವಾಗಿ ಬೇಕಾಗಿದೆ. ಬಸವಣ್ಣನವರ ವಚನಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಿದ್ದೆ ಆದರೆ ಸಮೃದ್ಧಿ ದೇಶವನ್ನು ಕಟ್ಟಬಹುದು ಎಂದರು.
ಸುರೇಶ ಲಮಾಣಿ, ಮುಸ್ಕಾನ ಸಿಂದಗಿ, ಡಾ. ದಣಿಕುಮಾರ, ಶಿವಪ್ಪ ಹೂಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net