ಬೆನ್​ ಜಿಮ್​ ಅಕಾಡೆಮಿಯ ಬೇಸಿಗೆ ಶಿಬಿರ ಸಮಾರೋಪ

15GDG07
ನಗರದ ಬೆನ್​ ಜಿಮ್​ ಅಕಾಡೆಮಿಯ ಬೇಸಿಗೆ ಶಿಬಿರದಲ್ಲಿ ಜರುಗಿದ ವೇದಿಕ್​ ಮ್ಯಾಥ್ಸ್​ ಲೈವ್​ ಸ್ಪರ್ಧೆಯ ವಿಜೇತೆ ಸ್ನೇಹಾ ವೇರ್ಣೆಕರ ಅವರಿಗೆ ಸೈಕಲ್​ ಬಹುಮಾನವಾಗಿ ವಿತರಿಸಲಾಯಿತು. ವಿ. ಬಿ. ಹಡಪದ, ರಾಜೇಶ ಲಿಂಗದಾಳ, ಯಶೋದಾ ಹಡಪದ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ ವಿದ್ಯಾಥಿರ್ನಿಯರು ಮೊಬೈಲ್​ ಮತ್ತು ಟಿವಿಯನ್ನು ಹಿತಮಿತವಾಗಿ ಬಳಸಿ, ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಬೇಕು. ಇವುಗಳ ಹುಚ್ಚು ಸರಿಯಲ್ಲ ಎಂದು ಗದಗ ಜಿಮ್ಸ್​ ಆಸ್ಪತ್ರೆಯ ಡಾ.ಈರಣ್ಣ ಹಳೇಮನಿ ಹೇಳಿದರು.
ನಗರದ ಹುಡ್ಕೋ ಕಾಲೋನಿಯ ಬೆನ್​ ಜಿಮ್​ ಅಕಾಡೆಮಿ ಪ್ರಾಥಮಿಕ ಮತ್ತು ಮಾದ್ಯಮಿಕ ಶಾಲಾ ವಿದ್ಯಾಥಿರ್ನಿಯರಿಗಾಗಿ ಇತ್ತೀಚೆಗೆ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾಥಿರ್ಗಳು, ಮೊಬೈಲ್​, ಸೋಸಿಯಲ್​ ಮಿಡಿಯಾದಲ್ಲಿ ಹಾಗೂ ಟಿವಿ ನೋಡುವುದರಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಅವರಲ್ಲಿ ವಿಚಾರಶಕ್ತಿ, ತರ್ಕ, ಚಿಂತನಾಶೀಲತೆ ಮಂಕಾಗುತ್ತಿದೆ. ಆದ್ದರಿಂದ ಮಕ್ಕಳು ಪೋಷಕರ, ಶಿಕರ ಮಾತು ಕೇಳಬೇಕು. ಸಲಹೆ ಸೂಚನೆ ಆಲಿಸಿ ಸನ್ಮಾರ್ಗದಲ್ಲಿ ಮುನ್ನಡೆದರೆ ಅವರ ಜೀವನ ಶ್ರೇಷ್ಠತೆಯನ್ನು ಪಡೆದುಕೊಳ್ಳುವುದು ಎಂದರು.

ಪೋಟೋ 15ಜಿಡಿಜಿ07
ನಗರದ ಬೆನ್​
ಡಿಡಿಪಿಐ ಕಚೇರಿಯ ತಾಂತ್ರಿಕ ನೆರವು ವಿಭಾಗದ ಶಿವಾನಂದ ಗಿಡ್ನಂದಿ ಮಾತನಾಡಿ ಬೇಸಿಗೆ ಶಿಬಿರದ ನೆಪದಲ್ಲಿ ಬೆನ್​ ಜಿಮ್​ ಅಕಾಡೆಮಿ ವಿದ್ಯಾಥಿರ್ಗಳಲ್ಲಿ ಕಲಿಕಾ ಪ್ರವೃತ್ತಿಯನ್ನು ಹೆಚ್ಚಿಸುವ, ಮನೋವಿಕಾಸಕ್ಕೆ ವೈವಿದ್ಯಮಯ ತರಬೇತಿ, ಮಾರ್ಗದರ್ಶನ ನೀಡುತ್ತಿರುವ ಸ್ವಾಗತಾರ್ಹ. ವೇದಿಕ್​ ಮ್ಯಾಥ್ಸ್​, ಅಬ್ಯಾಕಸ್​ನಂತ ಹವ್ಯಾಸವನ್ನು ರೂಢೀಸುವ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನ ಬೆಳೆಸುವ ಕಾರ್ಯ ಮಾಡುತ್ತಿರುವದು ಅಭಿನಂದನೀಯ ಎಂದರು.
ಸಮಾರಂಭದ ಅಧ್ಯತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯ ಟಿ. ವೈ. ಹಡಪದ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವು ಕಾರ್ಯಗಳನ್ನು ರೂಪಿಸಲಾಗಿದೆ. ಬರಲಿರುವ ದಿನಗಳಲ್ಲಿ ಕಾರ್ಯಗಳನ್ನು ಅನುಷ್ಠಾನ ಗೊಳಿಸಲಾಗುವದು ಎಂದರು.
ವೇದಿಕ್​ ಮ್ಯಾಥ್ಸ್​ ಲೈವ್​ ಸ್ಪರ್ಧೆಯ ವಿಜೇತೆ ಸ್ನೇಹಾ ವೇರ್ಣೆಕರ ಅವರಿಗೆ 7 ಸಾವಿರ ರೂ. ಮೌಲ್ಯದ ಸೈಕಲ್​ ಬಹುಮಾನವಾಗಿ ವಿತರಿಸಿ ಪ್ರೋತ್ಸಾಹಿಸಲಾಯಿತು. ವಿ. ಬಿ. ಹಡಪದ, ರಾಜೇಶ ಲಿಂಗದಾಳ, ಯಶೋದಾ ಹಡಪದ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net