

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಸಹಾಯ ಸಹಕಾರ ಮತ್ತು ಶ್ರಮಿಸಿದ ಎಲ್ಲ ಮಹನೀಯರಿಗೆ ಅಭಿನಂದನ ಕಾರ್ಯಕ್ರಮವನ್ನು ಇತ್ತಿಚೆಗೆ ವಾಣೀಜ್ಯೋದ್ಯಮ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಬಳಗಾನೂರ ಚಿಕ್ಕೇನಕೊಪ್ಪದ ಶಿವಶಾಂತವೀರ ಶರಣರು, ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಸಲ್ಲಿಸುವುದರ ಜೊತೆಗೆ ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ನಮ್ಮ ಧರ್ಮವಾಗಿದೆ. ಸಮಾಜದವೇಯಲ್ಲಿ ತೃಪ್ತಿಯನ್ನು ಕಂಡುಕೊಳ್ಳಬಹುದು. ಬಾಳಿನಲ್ಲಿ ಬೆಳಕನ್ನು, ಬದುಕಿಗೆ ಶ್ರೇಯಸ್ಸು ತರುತ್ತದೆ. ಮನುಷ್ಯ ದುಡಿಯಬೇಕು, ಪ್ರಪಂಚವನ್ನು ಕಟ್ಟಿಕೊಳ್ಳಬೇಕು. ಜೊತೆಗೆ ಪರಿಸರ ಭಾಂದವ್ಯ ಸಂ ಸಂಸ್ಥೆಗಳ ಕಾರ್ಯಗಳಲ್ಲಿ ಭಾಗವಹಿಸಿ ತನ್ನ ವಿಕಾಸವನ್ನು ಹೆಚ್ಚಿಸಿಕೊಳ್ಳಬೇಕು ದುಡಿಮೆಯಲ್ಲಿ ಒಂದು ಭಾಗವನ್ನು ಹಂಚ್ಚುವುದರಿಂದ ದೇವಗುಣ, ಧರ್ಮಗುಣ, ಮಾನವೀಯ ಗುಣವಾಗಿ ಕಾಯಕ ಉದ್ಯೋಗದಲ್ಲಿ ತೊಡಗಿದವರು ತಾನು ಮಾಡುವ ಉದ್ಯೋಗದಲ್ಲಿ ತೃಪ್ತಿ, ನೆಮ್ಮದಿ ಸಿಗುತ್ತದೆ ಎಂದರು.
ಸಂಸ್ಥೆಯ ಅಧ್ಯ ತಾತನಗೌಡ ಪಾಟೀಲ ಮಾತನಾಡಿ, ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಸಹಾಯ ಸಹಕಾರ ನೀಡಿ ಸಮಾರಂಭವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮತ್ತು ಈ ಸಮಾರಂಭವು ಯಶಸ್ವಿಯಾಗಲು ತಾವು ತನು, ಮನ, ಧನ ಸಹಾಯದಿಂದ ಸಮಾರಂಭವು ಅದ್ದೂರಿಯಾಗಿ ಯಶಸ್ವಿಯಾಗಿ ಜರುಗಿತು ಎಂದರು.
ಸಂಸ್ಥೆಯ ಸದಸ್ಯರಾದ ರಮೇಶ ಶಿಗ್ಲಿ, ಸಂಗಮೇಶ ದುಂದೂರ, ರಾವೇಂದ್ರ ಕಾಲವಾಡ, ಶರಣಬಸಪ್ಪ ಗುಡಿಮನಿ, ಅಶೋಕಗೌಡ ಪಾಟೀಲ ಇತರರು ಇದ್ದರು.