12 ಕೋಟಿ ಜನತೆ ತಲುಪಿದ ಇಂಡಿಯಾ ಪೊಸ್ಟ್ ಪೆಮೆಂಟ್ ಬ್ಯಾಂಕ್; ಅಂಚೆ ಅಧೀಕ್ಷಕ ರಮೇಶ ಮಡಿವಾಳರ

Published on
ಗದಗ: ದೇಶ ಎಲ್ಲೆಡೆ ವಿಶ್ವಾಸಾರ್ಹ ಜೊತೆಗೆ ಪ್ರತಿಯೊಬ್ಬರಿಗೂ ವಿದ್ಯುನ್ಮಾನ ಹಣಕಾಸು ವಹಿವಾಟು ಸೇವೆ  ಕ್ಷೇತ್ರದಲ್ಲಿ ಹೊಸ ಭಾಷ್ಯ ಐಪಿಪಿಬಿ ( ಇಂಡಿಯಾ ಪೊಸ್ಟ್ ಪೆಮೆಂಟ್ ಬ್ಯಾಂಕ್) ದಾಪುಗಾಲು ಇರಿಸಿದೆ ಎಂದು ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ  ಸೋಮವಾರ ನಡೆದ (ಐಪಿಪಿಬಿ )ಇಂಡಿಯಾ ಪೊಸ್ಟ್ ಪೆಮೆಂಟ್ ಬ್ಯಾಂಕ್ 8ನೇ ವರ್ಷದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ‌‌ ಅವರು,  ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅಂಚೆ ಇಲಾಖೆ ಸೇವೆ ತಲುಪಿಸುವ ಸದಾವಕಾಶ ಲಭಿಸಿದೆ. ಇದನ್ನು ಸದ್ಭಳಕೆ ದಿಸೆಯಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಿದೆ ಎಂದರು.
 ಕೇವಲ 7 ವರ್ಷದಲ್ಲಿ ದೇಶದ 12 ಕೋಟಿ ಜನರಿಗೆ ಡಿಬಿಟಿ ಸೇವೆ ಕಲ್ಪಿಸಿದೆ.  ಹಾಗಾಗಿ 7 ವರ್ಷದಲ್ಲಿ ದೇಶದ ಮುಂಚೂಣಿ ಬ್ಯಾಂಕಿಂಗ್ ಮಾಡಿದೇ ಇರುವ ಕೆಲಸವನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ಇದರಿಂದಾಗಿ ಐಪಿಪಿಬಿ ಬ್ಯಾಂಕ್ 155 ಲಕ್ಷ ಕೌಂಟರ್ ಸೇವೆ ಜೊತೆಗೆ ಡಿಜಿಟಲ್ ಮತ್ತು ಕ್ಯಾಷ್ ಲೇಸ್ ವ್ಯವವಾಹರ ನೀಡಿದ ಸಾಧನೆ‌ ತೋರಲು ಸಾಧ್ಯವಾಗಿದೆ. ಹೀಗಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳಾದ ಅಮೇರಿಕ, ಜಪಾನ ಚೀನಾ  ದೇಶ ನಮ್ಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದರು.
ಮುಂಬರುವ ದಿನಗಳಲ್ಲಿ ಜನಸ್ನೇಹಿ ಯೋಜನೆಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯಲು ಗದಗ ವಿಭಾಗೀಯ ಪ್ರಾಮಾಣಿಕ ಪಯತ್ನ ಮಾಡಲು ಮುಂದಾಗಬೇಕು ಸಲಹೆ ನೀಡಿದರು.
ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾದವ ಮಾತನಾಡಿ,  ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು  ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ನೀಡುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಅಂಚೆ ಇಲಾಖೆ ಸಿಬ್ಬಂದಿ ಅಂಚೆ ಇಲಾಖೆಯು ಅಪಘಾತ ವಿಮೆ, ಆರೋಗ್ಯ ವಿಮೆ ಮತ್ತು ಮಕ್ಕಳ ವಿಮಾ ಯೋಜನೆಗಳನ್ನೂ ನೀಡುತ್ತದೆ. ಈ ಯೋಜನೆಗಳು ಕಡಿಮೆ ಪ್ರೀಮಿಯಂ ದರಗಳಲ್ಲಿ ಸಾಕಷ್ಟು ಉಪಯುಕ್ತವಾಗಿವೆ. ಅವುಗಳನ್ನು ಗ್ರಾಹಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ತೋರಬೇಕು ಎಂದರು. ಅಂದಾಗ ಮಾತ್ರ ನಮ್ಮ ಇಲಾಖೆ ಸಾಧನಾ ನಾಗಲೋಟ ದೇಶದ ಎಲ್ಲೆಡೆ ಪ್ರಚುರಪಡಿಸಲು ಅತ್ಯಂತ ಸಹಕಾರಿಯಾಗಿದೆ ಎಂದರು.
ಪ್ರಧಾನ‌ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ ಮಾತನಾಡಿ,ಅಂಚೆ ಇಲಾಖೆ ಸಿಬ್ಬಂದಿ ಸತತ ಉದ್ಯೋಗಿಯಾಗಿರುವದರಿಂದ ಜಾಗತಿಕ‌ ಮಟ್ಟದಲ್ಲಿ ಐಪಿಪಿಬಿ ಸಾಧನೆ ತೋರಲು ಸಾಧ್ಯವಾಗಿದೆ ಎಂದರು.
ಕೇಂದ್ರ  ಸರ್ಕಾರ ವಿವಿಧ ಮಹತ್ವದ ಯೋಜನೆಗಳನ್ನು  ದೇಶದ ಎಲ್ಲೆಡೆ ಪರಿಚಯಿಸಲು ಅಂಚೆ ಇಲಾಖೆ ಜೊತೆಗೆ ಐಪಿಪಿಬಿ ಜೋಡಿಸಿ ಕೆಲಸ‌ ಆರಂಭಿಸಿದರಿಂದಾಗಿ ಅಂಚೆ ವ್ಯವಹಾರ ಸರಳೀಕರಣ ಹಾಗೂ ವೇಗವಾಗಿ ಜನರಿಗೆ ಹಣಕಾಸು ಸೇವೆ ನೀಡಲು ಸಹಕಾರಿಯಾಗಿದೆ ಎಂದರು. ಐಪಿಪಿಬಿ ಗದಗ ವಿಭಾಗದ ವ್ಯವಸ್ಥಾಪಕ ಆನಂದ ಸಾಗರ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಸಹಾಯಕ ಅಂಚೆ ಅಧೀಕ್ಷಕರಾದ ವಿ.ಸುನೀಲಕುಮಾರ, ಡಿ.ಜಿ.ಮ್ಯಾಗೇರಿ, ಶರಣಪ್ಪ ನಾಯ್ಕರ, ನಿಂಗಪ್ಪ‌ ಹೂಗಾರ, ಶರಣಯ್ಯ ಹಿರೇಮಠ, ಸಿದ್ದಲಿಂಗೇಶ ಯಂಡಿಗೇರಿ, ವೆಂಕಟೇಶ ಆಕಳವಾಡಿ, ಐಪಿಪಿಬಿ ಸಿಬ್ಬಂದಿ ಜಾವೀದ ಜಿ, ಗುಳಪ್ಪ ಕುಂಬಾರ ಸೇರಿದಂತೆ ಪ್ರಧಾನ ಅಂಚೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಶಿವರಾಜ ಕೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net