ಗದಗ ಪರಿಸರದಲ್ಲಿ ವಿನೂತನ ಪ್ರಯೋಗ 24*7 ಸ್ಟಡಿ ಹಾಲ್ ಉದ್ಘಾಟನೆ.

IMG-20250113-WA0085
Published on
ಗದಗ:  ನಗರದ ಏಕದಂತ ಫೌಂಡೇಶನ್ ಟ್ರಸ್ಟ್(ರಿ) ಸಂಸ್ಥೆಯಿಂದ 24 ಗಂಟೆಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಲು ವಿಸ್ಡಮ ಡ್ರೀಮ್ಸ್ ಲೈಬ್ರರಿ ಉದ್ಘಾಟನೆ ಹಾಗೂ ವಿಸ್ಟಮ್ ಟುಟೋರಿಯಲ್ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭವನ್ನು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಹಿರಿಯ ಇಂಗ್ಲಿಷ್ ಉಪನ್ಯಾಸಕರು ಹಾಗೂ ಪ್ರಾಚಾರ್ಯರಾದ ಶ್ರೀ ಡಿ ಬಿ ಗವಾನಿ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಗದಗ ಪರಿಸರದಲ್ಲಿ ಇಂತಹ ಒಂದು ಲೈಬ್ರರಿ ಬಹಳಷ್ಟು ಅವಶ್ಯಕತೆ ಇತ್ತು ಆ ಕನಸನ್ನ ನನಸು ಗೊಳಿಸಿದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ವೀರೇಶ್ ಎಸ್ ಅಣ್ಣಿಗೇರಿ ಹಾಗೂ ಅವರ ತಂಡದ ಎಲ್ಲ ಸದಸ್ಯರಿಗೂ  ಅಭಿನಂದಿಸುತ್ತ ವಿದ್ಯಾರ್ಥಿಗಳು ಇಂದು ಅಧ್ಯಯನದಿಂದ ಬಹಳ ದೂರ ಉಳಿಯುತ್ತಿದ್ದಾರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಬೇಕಾದರೆ ಪ್ರತ್ಯೇಕ ಅಧ್ಯಯನ ಮಾಡಲು ಕೊಠಡಿ ಬಹಳಷ್ಟು ಅವಶ್ಯಕತೆ ಇದೆ ಒಂದು ಹೊಸ ಅವಕಾಶವನ್ನು ಗದಗ ಪರಿಸರದ ಯುವ ಯುವತಿಯರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಮುಂಬರುವ ದಿನಮಾನಗಳಲ್ಲಿ ಆಯ್. ಎ. ಎಸ್, ಕೆ ಎ ಎಸ್,  ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕೆಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಗದುಗಿನ ಶ್ರೀ ಮುಕ್ಕಣ್ಣೇಶ್ವರ ಮಠದ ಪೂಜ್ಯಶ್ರೀ ಶಂಕರಾನಂದ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ವಿಸ್ಡಮ್ ಸಂಸ್ಥೆಯ ಸಂಸ್ಥಾಪಕರಾದ ವೀರೇಶ್ ಎಸ್ ಅಣ್ಣಿಗೇರಿ ಮಾರ್ಗದರ್ಶಕರಾದ  ಎನ್ ವಿ ರಾಥೋಡ್ ಮುಖ್ಯ ಅತಿಥಿಗಳಾಗಿ ಕೆ ವಿ ಎಸ್ ಆರ್ ಪದವಿ ಪೂರ್ವ ಮಹಾವಿದ್ಯಾಲಯ ದ ನಿವೃತ್ತ ಪ್ರಾಂಶುಪಾಲರಾದ ಅನಿಲ್ ವೈದ್ಯ ಡಿ ಸಿ ಪಾವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರು ಎಸ್ ಪಿ ಗೌಳಿ ಖ್ಯಾತ ವಕೀಲರು ಸಾಮಾಜಿಕ ಹೋರಾಟಗಾರರಾದ ರವಿಕಾಂತ್ ಅಂಗಡಿ ಯವರು ಎಸ್ ಜೆ ಟಿ ಐ ಟಿ (ಜೆ ಟಿ ಓ) ಗಿರೀಶ್ ಬಡಿಗೇರ್ ಮಂಜುನಾಥ್ ಮಲ್ಲಾಪುರ್( ಪಂಪ ಟುಟೋರಿಯಲ್) ಧಾರವಾಡ ಈ ಕಾರ್ಯಕ್ರಮದಲ್ಲಿ ಸಂಸ್ಥೆಯು ನಡೆದ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಅಮಿನಬೇಗಂ ಜಿ ಹಿರೇಮಸೂತಿ ಮತ್ತು ದುರ್ಗಾಶ್ರೀ ಬಂಡಿವಡ್ಡರ್ ವಿವರಿಸಿದರು. ಎ ಎಸ್ ಎಸ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಬಾಹುಬಲಿ ಜೈನರ್ ನಿರೂಪಿಸಿದರು. ಇದೆ ಸಂದರ್ಭದಲ್ಲಿ ಶ್ರೀ ಏಕದಂತ ಫೌಂಡೇಶನ್ ಟ್ರಸ್ಟ್ ನಿಂದ ಸೈನಿಕ ಶಾಲೆ, ಮುರಾರ್ಜಿ, ನವೋದಯ ವಸತಿ ಶಾಲೆಗಳಿಗೆ ಆಯ್ಕೆಯಾದ 20 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net