ಮಾಧ್ಯಮಿಕ ಶಾಲಾ ನೌಕರ ಸಂಘದಿಂದ ಶೈಕ್ಷಣಿಕ ಸಮಾವೇಶ, ಕಾರ್ಯಾಗಾರ

27GDG03
Published on
ಗದಗ: ಜಿಲ್ಲಾ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಕುರಿತು ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ವತಿಯಿಂದ ನ.30 ರಂದು ಬೆಳಗ್ಗೆ 10.30 ಕ್ಕೆ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿನೂತನ  ಕಾರ್ಯಾಗಾರ ನಡೆಸುವ ಮೂಲಕ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಿಂದ ಕ್ರಮವಾಗಿ 30ನೇ ಸ್ಥಾನ, 27 ಹಾಗೂ 15 ಸ್ಥಾನದಲ್ಲಿ ಜಿಲ್ಲೆಯ ಫಲಿತಾಂಶಗಳು ಬಂದಿವೆ. ಈ ವರ್ಷದಲ್ಲಿ ಕನಿಷ್ಠ 9 ನೇ ಸ್ಥಾನದ ಒಳಗೆ ಜಿಲ್ಲೆಯ ಫಲಿತಾಂಶ ಪಡೆಯುವ ಹಿನ್ನೆಲೆಯಲ್ಲಿ ಕಾರ್ಯಾಗಾರ ನಡೆಸುವುದು ಅವಶ್ಯವಿದೆ. ಮಕ್ಕಳು ಹಿತದೃಷ್ಟಿಯಿಂದ, ಶಿಕ್ಷಕರು ಶಾಲೆಯಲ್ಲಿ ನೂತನ ಚಟುವಟಿಕೆ ಕೈಗೊಳ್ಳಲು ಕಾರ್ಯಾಗಾರ ನಡೆಸಲಾಗುತ್ತಿದೆ. ಕಾರ್ಯಾಗಾರದಲ್ಲಿ ಶಾಲೆಯಲ್ಲಿ ಎನೆನೂ ಕಾರ್ಯಕ್ರಮ ಕೈಗೊಳ್ಳಬೇಕು ಎಂಬುದರ ನೀಲನಕ್ಷೆ ಸಿದ್ಧವಾಗಲಿದೆ ಎಂದು ಹೇಳಿದರು.
ದಿನನಿತ್ಯ ಶೈಕ್ಷಣಿಕ ವ್ಯವಸ್ಥೆ ಬದಲಾಗುತ್ತಿದೆ. ಹೊಸ ಸಂಶೋಧನಾ ವೈಖರಿ ಪ್ರತಿನಿತ್ಯ ಹೊರ ಬರುತ್ತಿದೆ. ಮಕ್ಕಳ ಕಲಿಕೆಯಲ್ಲಿ ನೂತನ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಕಾರ್ಯಾಗಾರ ಅನಿವಾರ್ಯ ಆಗಿದೆ ಎಂದರು.
ಶಾಲೆಯಲ್ಲಿ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಒಂದು ಗಂಟೆ ಶಾಲಾ ಅವಧಿಯನ್ನು ವಿಸ್ತರಿಸಿ ಎಸ್.ಎಸ್. ಎಲ್. ಸಿ. ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗಿರೀಶ ನರಗುಂದ, ಬಿ.ಕೆ. ನಿಂಬಣಗೌಡರ, ಆರ್.ವಿ. ಗೊಂಡಬಾಳ, ಬೂದಪ್ಪ ಅಂಗಡಿ, ಬಿ.ಸಿ. ಗುಳೇದ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net