ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ.

Published on
ಗಜೇಂದ್ರಗಡ: ತಾಲೂಕಿನ ರಾಜೂರಿನ ಶ್ರೀ ಬಸವೇಶ್ವರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೆ. ಬಿ. ಬೆನಕನವಾರಿ, ಮುಖ್ಯ ಅತಿಥಿಗಳಾದ ಶ್ರೀಮತಿ ಜಿ. ಜಿ. ವ್ಯಾಪಾರಿ ಹಾಗೂ ಶ್ರೀಮತಿ ಎಸ್. ಕೆ. ಬೆನಕನವಾರಿ ರವರು ಭಕ್ತ ಕನಕದಾಸರ  ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಶ್ರೀ ಕೆ . ಬಿ. ಬೆನಕನವಾರಿ ರವರು ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತನಾದ ಶ್ರೀ ಕನಕದಾಸರು ದಾರ್ಶನಿಕ ಕವಿ, ಸಮಾಜ ಸುಧಾರಕ, ವೈಚಾರಿಕ ಸಂತರು, ಕಾಲಜ್ಞಾನಿ, ಕವಿ ಕಲಾತಿಲಕ, ಶ್ರೇಷ್ಠ ದಾಸರು, ಮಹಾ ಸಂತರು ಹಾಗೂ ಕೀರ್ತನೆಗಳ ಮೂಲಕ ಜನರಲ್ಲಿದ್ದ ಮೂಡನಂಬಿಕೆ ಹೋಗಲಾಡಿಸಲು ಶ್ರಮಿಸಿದ ಕನ್ನಡ ಸಾಹಿತ್ಯ ಚರಿತ್ರೆಯ ಅದಮ್ಯ ಚೇತನರಾಗಿದ್ದರು. ಮಕ್ಕಳಿಗಾಗಿ ಸಂಪತ್ತು ಮಾಡುವ ಮೊದಲು ಒಳ್ಳೆಯ ಸಂಸ್ಕಾರ ನೀಡಬೇಕು. ತನ್ನ ತಾನು ಅರಿತವನು ಮಹಾತ್ಮನಾಗುತ್ತಾನೆ ಹೀಗಾಗಿ ಎಲ್ಲರೂ ಕನಕದಾಸರ ತತ್ವ ವಿಚಾರಗಳನ್ನು ಅರಿತುಕೊಂಡು ಉತ್ತಮ ಜೀವನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಜಿ. ಜಿ. ವ್ಯಾಪಾರಿ ಹಾಗೂ ಶ್ರೀಮತಿ ಎಸ್. ಕೆ. ಬೆನಕನವರಿ ರವರು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದರು. ಹಾಗೂ ವಿದ್ಯಾರ್ಥಿಗಳಾದ ಕು. ಗಣೇಶ ಗೂಳಿ, ಕು. ತೃಪ್ತಿ ಗೂಳಿ, ಕು. ನಿಂಗಾರಾಜ ಕಪ್ಪರದ ಹಾಗೂ ಕು. ಪ್ರವೀಣ ಕತ್ತಿಯವರ ರವರು ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕು. ಪುಟ್ಟರಾಜ ಕಡಬಲಕಟ್ಟಿ ನಿರೂಪಿಸಿದರು, ಕು. ವಿದ್ಯಾಶ್ರೀ ಬೆನಕನವಾರಿ ಸ್ವಾಗತಿಸಿದರು ಹಾಗೂ ಕು. ಕಿರಣಕುಮಾರ ಮುಧೋಳ ವಂದಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರು, ಅತಿಥಿಗಳು, ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net