ವಿನಯ್ ಕುಲಕರ್ಣಿಯವರ ಗೌರವ ಧಕ್ಕೆ!

WhatsApp Image 2024-10-15 at 5.31.02 PM
Published on

ಮಹಿಳೆ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿ

ಗದಗ: ಧಾರವಾಡ ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ದ ರೈತ ಮಹಿಳೆ ಅಂತಾ ಹೇಳಿ ಮಂಜುಳಾ ಪೂಜಾರ ಷಡ್ಯಂತ್ರ ರೂಪಸಿರುವದು ಸತ್ಯಕ್ಕೆ ದೂರವಾದ ಮಾತು, ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿರುವ ಶಾಸಕರನ್ನು ಕುಗ್ಗಿಸುವ ಕೆಲಸ ತಮ್ಮ ತನು ಮನ ಧನ ಸಹಾಯ ನೀಡಿದವರು ಅವರ ಹೆಸರು ಹಾಳುಮಾಡುವ ಉದ್ದೇಶದಿಂದ ಕೂಡಿದ ಷಡ್ಯಂತ್ರವಾಗಿದೆ.
ರೈತ ಮಹಿಳೆ ಅಂತಾ ಈ ಹಿಂದೆ ಖಾಸಗಿ ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗಿದೆ ಅವರ ದಬ್ಬಾಳಿಕೆ ಕೂಡ ಸಮಸ್ತ ಕರ್ನಾಟಕದ ಜನತೆ ಕೂಡ ನೋಡಿದ್ದಾರೆ ನಕಲಿ ರೈತ ಮಹಿಳೆ ಜನಪ್ರಿಯ ಶಾಸಕರಾದ ವಿನಯ ಕುಲಕರ್ಣಿಯವರ ಗೌರವಕ್ಕೆ ಧಕ್ಕೆ ತರುವುತ್ತಿರುವುದನ್ನು ಗದಗ ಜಿಲ್ಲೆ ಪಂಚಮಸಾಲಿ ಸಮಾಜ ಖಂಡಿಸುತ್ತದೆ ಆ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಮುಖಂಡರು ಗದಗ ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಪ್ ವಿ ಮರಿಗೌಡ್ರ, ಮಹೇಶ ಕರಿಬಿಷ್ಠಿ, ಶಾಂತಪ್ಪ ಮುಳವಾಡ, ಚನ್ನವೀರಪ್ಪ ಮಳಗಿ, ಯುವ ಘಟಕದ ಅಧ್ಯಕ್ಷರು ಅಯ್ಯಪ್ಪ ಅಂಗಡಿ, ಬಸವರಾಜ ಗಡ್ಡೆಪ್ಪನವರ, ಅಶೋಕ ಸಂಕಣ್ಣವರ, ಶೇಖಣ್ಣ ಕಣಿಗಿನಾಳ, ರವಿ ನೇರಗಲ್ಲ, ಕುಮಾರ್ ಹೊಂಬಳ, ಈರಣ್ಣ ಕರಿಬಿಷ್ಠಿ, ಬೈಲಪ್ಪ ಕುರ್ತಕೋಟಿ, ಗುರಿಕಾರ, ಬಿ ಬಿ ಸುರಪ್ಪಗೌಡ್ರ, ಎಂ. ಎಸ್. ಪರ್ವತಗೌಡ್ರ, ಸಂಗಮೇಶ ಕವಳಿಕಾಯಿ ಸೇರಿದಂತೆ ಗದಗ ಜಿಲ್ಲೆಯ ಪಂಚಮಸಾಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net