‘ನೆಲದ ಹಾಡು’ ಕೃಷಿ ಕುರಿತು ಕವಿಗೋಷ್ಠಿ

DSC_0890
ಕಸಾಪದಿಂದ ಜರುಗಿದ ‘ನೆಲದ ಹಾಡು’ ಕವಿಗೋಷ್ಠಿಯನ್ನು ಕವಿ, ಖಜಾನೆ ಅಧಿಕಾರಿ ವಿ. ಹರಿನಾಥಬಾಬು ಉದ್ಘಾಟಿಸಿದರು. ಡಾ. ಅರ್ಜುನ ಗೊಳಸಂಗಿ, ಟಿ.ಎಸ್.ಗೊರವರ ಮೊದಲಾದವರು ಉಪಸ್ಥಿತರಿದ್ದಾರೆ.
Published on

ಕವಿತೆ ಸಮಕಾಲೀನ ಸಂಕಟಗಳಿಗೆ ದನಿಯಾಗಬೇಕು : ವಿ.ಹರಿನಾಥಬಾಬು

ಗದಗ: ಕವಿಗೆ ಬದ್ಧತೆ ಮತ್ತು ಸುತ್ತಲಿನ ಸಂಗತಿಗಳನ್ನು ಸೂಕ್ಷö್ಮವಾಗಿ ಅವಲೋಕಿಸಿ ಅಭಿವ್ಯಕ್ತಿಸುವ ಒಳದನಿ ಇರಬೇಕು. ಕೃಷಿಕರ ಬದುಕು, ಬವಣೆಗಳು ಕತೆ, ಕವಿತೆಯ ವಸ್ತುಗಳಾಗಿ ಓದುಗರನ್ನು ತಲುಪಿ ನ್ಯಾಯ ಒದಗಿಸುವ ದಿಸೆಯಲ್ಲಿ ಸಾಹಿತಿ ಕಾರ್ಯಮಾಡಬೇಕು ಎಂದು ಸಾಹಿತಿ ಗದಗ ಜಿಲ್ಲಾ ಖಜಾನೆ ಅಧಿಕಾರಿ ವಿ.ಹರಿನಾಥಬಾಬು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ನಿರಂತರ ಪ್ರಕಾಶನ ಗದಗ ತುಷಾರ ಪ್ರಕಾಶನ ಕೊಪ್ಪಳ ಸಹಯೋಗದಲ್ಲಿ ಅರಹುಣಸಿಯ ರಮೇಶ ಕುರಿಯವರ ತೋಟದಲ್ಲಿ ನೆಲದ ಹಾಡು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷ ಕಂಡರಿಯದ ಬಿಸಿಲನ್ನು ನಾವು ಕಂಡಿದ್ದೇವೆ. ಮಳೆಯೇ ಬರಲಿಕ್ಕಿಲ್ಲೇನೋ ಎನ್ನುವಷ್ಟು ಆತಂಕ ಮನೆ ಮಾಡಿತ್ತು ಆದರೆ ಮಳೆ ಬಂದಿತು. ಬೇಸಿಗೆ ಆವಾಂತರದಿAದ ಹೊಲದ ಸಾವಿರಾರು ಸಸಿಗಳು ಕಮರಿ ಹೋದವು. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿ ಕವಿಹೃದಯದ ಮನುಷ್ಯರು ಆತಂಕಿತರಾಗಲಿಲ್ಲ ಇದು ದುರಂತ. ಏಕೆಂದರೆ ಜನಮಾನಸದ ದುರಂತಗಳನ್ನು, ಬಯಕೆಗಳನ್ನು ಕಾವ್ಯ ಕಥೆಯ ಮೂಲಕ ವ್ಯಕ್ತಪಡಿಸುವ ಸಾಮರ್ಥ್ಯವಿರುವವರೆ ಕೈಕಟ್ಟಿ ಕುಳಿತರೆ ಅದು ಮನುಷ್ಯತ್ವದ ಕೊನೆಯೆಂದೇ ಭಾವಿಸಬೇಕಾಗುತ್ತದೆಂದು ನುಡಿದರು.
ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ ಟಿ.ಎಸ್.ಗೊರವರ ಮಾತನಾಡಿ ಕಾವ್ಯದ ಆಶಯ ಮತ್ತು ರೂಪಕಗಳ ಬಗೆಗೆ ಕವಿಗಳಿಗೆ ಸ್ಪೂರ್ತಿಯಾಗಿ ರೈತಾಪಿ ಬದುಕು ಹಾಸುಹೊಕ್ಕಾಗಿತ್ತು ಆದರೆ ಈಗ ಅದರಿಂದ ವಿಮುಖರಾಗುತ್ತಿದ್ದೇವೆ. ಜಾಗತೀಕರಣದಿಂದ ವ್ಯಾಪಾರಿ ಭಾವನೆಯನ್ನು ಬಿತ್ತಲಾಗಿದೆ. ಅದಕ್ಕಾಗಿ ಕೃಷಿ ಹಿಮ್ಮುಖವಾಗಿದೆ. ಕಿರಾಣಿ ವಸ್ತುಗಳಿಗೆ ಬೆಲೆ ಇರುವಂತೆ ರೈತ ಬೆಳೆಗೆ ಬೆಲೆ ಇಲ್ಲದಾಗಿದೆ ಅದಕ್ಕಾಗಿ ಕೃಷಿ ದುಬಾರಿಯಾಗಿದೆ. ಯಂತ್ರಕ್ಕೆ ಇದಾವುದನ್ನೂ ಸೃಷ್ಠಿಸಲು ಸಾಧ್ಯವಿಲ್ಲ ಅದಕ್ಕಾಗಿ ಕೃಷಿಯನ್ನು ಉತ್ತೇಜನ ಮಾಡಬೇಕು. ಕೃಷಿಯ ಸಾದ್ಯತೆಗಳ ಕುರಿತು ಚಿಂತನೆಯನ್ನು ಬೆಳೆಸಬೇಕೆಂದು ಗೊರವರ ನುಡಿದರು.

ಕವಿಗೋಷ್ಠಿಯಲ್ಲಿ ಮಾಲಾ ಡಿ. ಬಡಿಗೇರ, ನಿರ್ಮಲಾ ಶೆಟ್ಟರ, ವಿಜಯಲಕ್ಷಿö್ಮ ಕೊಟಗಿ, ಚಂದ್ರಕಲಾ ಇಟಗಿಮಠ, ಪ್ರೊ.ಶಕುಂತಲಾ ಸಿಂಧೂರ, ಭಾಗ್ಯಶ್ರೀ ಹುರಕಡ್ಲಿ, ಮರುಳಸಿದ್ದಪ್ಪ ದೊಡ್ಡಮನಿ, ಹೆಬಸೂರ ರಂಜಾನ್ ಧಾರವಾಡ, ಶಿವಕುಮಾರ ಕರನಂದಿ, ಲಕ್ಷö್ಮಣ ನಂದಿಹಾಳ, ಶಿ. ಕಾ ಬಡಿಗೇರ, ಪಿ.ಎಸ್. ಅಮರದೀಪ, ಮಹೇಶ ಬಳ್ಳಾರಿ, ಮಂಜುನಾಥ ಚಿತ್ರಗಾರ, ಸುರೇಶ ಕಂಬಳಿ, ಕುಮಾರ ಅಮಾತ್ತೆಣ್ಣವರ ಕೊಪ್ಪಳ, ಅಲಿ ಎಂ.ಕೆ. ಕೊಪ್ಪಳ, ಮಂಜುಳಾ ವೆಂಕಟೇಶಯ್ಯ, ಡಾ. ವಿನಾಯಕ ಕಮತದ, ನೀಲಮ್ಮ ಅಂಗಡಿ, ಕು. ಸಾಕ್ಷಿ ರವಿ ದೇವರಡ್ಡಿ, ಮೈಲಾರಪ್ಪ ಬೂದಿಹಾಳ, ಚಂದ್ರಕಲಾ, ಪ್ರೊ. ಬಸವರಾಜ ನೆಲಜೇರಿ, ವಿರೂಪಾಕ್ಷ ಕಟ್ಟಿಮನಿ, ಹನಮಂತ ಸೋಮನಕಟ್ಟಿ , ಈಶ್ವರ ಕುರಿ , ಯಲ್ಲಪ್ಪ ಹರ್ನಾಳಗಿ, ನೂರಅಹಮದ್ ನಾಗನೂರ, ರಂಗನಾಥ ಅಕ್ಕಸಾಲಿ, ರಮಾ ಚಿಗಟೇರಿ, ಅನಸೂಯಾ ಮಿಟ್ಟಿ ಮೊದಲಾದವರು ಕವನ ವಾಚಿಸಿದರು.
ವೇದಿಕೆ ಮೇಲೆ ಡಾ.ಅರ್ಜುನ ಗೊಳಸಂಗಿ, ಅನ್ನದಾನಿ ಹಿರೇಮಠ, ಪ್ರೊ.ಅನ್ನದಾನಿ ಹಿರೇಮಠ, ಬಸವರಾಜ ನೆಲಜೇರಿ ನಿರೂಪಿಸಿದರು. ಡಿ.ಎಸ್.ಬಾಪುರಿ ಸ್ವಾಗತಿಸಿದರು. ಶಿಲ್ಪಾ ಮ್ಯಾಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net