ಸದೃಢ ಆರೋಗ್ಯವು ನಮ್ಮೆಲ್ಲರ ಸಂಪತ್ತು

1
Published on

ಗದಗ : ಆರೋಗ್ಯವೇ ಭಾಗ್ಯ. ಸದೃಢ ಆರೋಗ್ಯವು ನಮ್ಮೆಲ್ಲರ ಸಂಪತ್ತು ಹೀಗಾಗಿ ಉತ್ತಮ ಆರೋಗ್ಯ ಹೊಂದುವಲ್ಲಿ ವಿದ್ಯಾರ್ಥಿಗಳು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ರೇವಣಸಿದ್ದೇಶ್ವರ ಉಪ್ಪಿನ ಹೇಳಿದರು.
ಅವರು ಜಂತ್ಲಿಶಿರೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗದಗ-ಬೆಟಗೇರಿ ರೋಟರಿ ಕ್ಲಬ್‌ದಿಂದ ಎರ್ಪಡಿಸಿದ್ದ ಮಕ್ಕಳ ದಂತ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ನೆರವೇರಿಸಿ ಮಾತನಾಡಿದರು.
ಹಲ್ಲುಗಳ ಸ್ವಚ್ಚತೆ ಅವಶ್ಯವಾಗಿದೆ. ಮಕ್ಕಳು ಹಲ್ಲಿನ ರಕ್ಷಣೆಗೆ ಮುಖ್ಯವಾಗಿ ಹಲ್ಲುಗಳನ್ನು, ಬಾಯಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವದು ಅವಶ್ಯ ಎಂದರು.
ರೋಟರಿ ಕ್ಲಬ್‌ನ ಶ್ರೀಧರ ಸುಲ್ತಾನಪೂರ ಮಾತನಾಡಿ ಮಕ್ಕಳು ಓದಿನ ಜೊತೆಗೆ ಆರೋಗ್ಯ ರಕ್ಷಣೆಯತ್ತ ಹೆಚ್ಚು ಗಮನ ಹರಿಸಬೇಕು. ದಂತಕುಳಿಗಳಿAದ ಹಲ್ಲಿನ ರಕ್ಷಣೆ ಅವಶ್ಯ ಎಂದರು.
ವೇದಿಕೆಯ ಮೇಲೆ ಕ್ಲಬ್‌ನ ಶಿವಾಚಾರ್ಯ ಹೊಸಳ್ಳಿಮಠ, ಸುರೇಶ ಕುಂಬಾರ, ಶಾಲಾ ಮುಖ್ಯೋಪಾಧ್ಯಾಯನಿ ಎನ್.ಎಂ.ಬನೂಸಿ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಡಾ.ಉಪ್ಪಿನ ದಂತಗಳನ್ನು ಪರೀಕ್ಷಿಸಿ ಸಲಹೆ ಸೂಚನೆ ನೀಡಿದರು. ಕ್ಷಮಾ ವಸ್ತçದ ಸ್ವಾಗತಿಸಿದರು, ಆರ್.ಬಿ.ಗುಡಗೂರ ನಿರೂಪಿಸಿದರು, ಎಸ್.ಎಂ.ಮರಿಗೌಡ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net