

ಗದಗ: ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಾಮಾಣಿಕತೆಯ ಪಾತ್ರ ಅನನ್ಯ ಎಂದು ಉಪನ್ಯಾಸಕ ಗಂಗಾಧರ ಹಿಡಿಕಿಮಠ ಅವರು ಹೇಳಿದರು.
ಡಾ. ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಸತ್ಯ ಶಾಂತಿ ಅನುಷಾ ಮಾರ್ಗದಿಂದ ಇಡೀ ವಿಶ್ವದ ಜನರ ಗಮನ ಸೆಳೆದವರಾಗಿದ್ದು ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಖ್ಯಾತ ವೈಲಿನ್ ವಾದಕ ಹಾಗೂ ಉಪನ್ಯಾಸಕ ಡಾ ನಾರಾಯಣ ಹಿರೇಕೋಳಚಿ ಅವರು ಮಾತನಾಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಶುಭ್ರವಾಗಿ ಇಟ್ಟುಕೊಳ್ಳುವುದರಿಂದ ಮನಸ್ಸಿಗೆ ಉತ್ಸಾಹ ಲಭಿಸುತ್ತದೆ ಎಂದು ಅವರು ಹೇಳಿದರು.
ಡಾ ಹನುಮಂತ್ ಹೂಗಾರ್ ಮಾತನಾಡಿ ಸ್ವಚ್ಛತೆಯು ದೇವರ ವಾಸಸ್ಥಾನವಾಗಿದ್ದು ಅದು ಮನುಷ್ಯರ ಆಕರ್ಷಣೀಯ ಸ್ಥಳವಾಗಿ ಕಾಣುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎನ್ಎಂ ಶೇಕ್, ಡಾ ಎಸ್ ಎಸ್ ಗಡ್ಡದಮಠ, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಶರಣಪ್ಪ ಕಲ್ಬುರ್ಗಿ, ವಿ ಎಂ ಪಟ್ಟದಕಲ್, ವಿ ಕೆ ಜೋಶಿ, ಬಿ ಎಚ್ ಜೋರಡ್ಡಿ, ಹೊಳೆಯಪ್ಪ ಓಲೆಕಾರ್, ಶೃತಿ ಪವನ್, ತ್ರಿವೇಣಿ