ಪ್ರತಿಯೊಬ್ಬ ಪ್ರಜೆಯೂ ಕಾನೂನು ಸಾಕ್ಷರರಾಗಬೇಕು: ಲಕ್ಷ್ಮೇಶ್ವರಮಠ

IMG-20240812-WA0059
Published on

ಗದಗ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿದ್ಯಾದಾನ ಸಮಿತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ  25 ನೇ ಅಂತರಾಷ್ಟ್ರೀಯ ಯುವ ದಿನ ಮತ್ತು ಸೈಬರ್ ಕ್ರೈಂ, ಲೈಂಗಿಕ ಕಿರುಕುಳ ಹಾಗೂ ರ‍್ಯಾಗಿಂಗ್ ವಿರೋಧ ಕುರಿತು ಜಾಗ್ರತಾ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ನಿವೃತ್ತ ವಕೀಲ ಎಫ್. ಪಿ. ಲಕ್ಷ್ಮೇಶ್ವರಮಠ ರವರು ಪ್ರಶಿಕ್ಷಣಾರ್ಥಿಗಳಿಗೆ ಕಾನೂನು ಸಾಕ್ಷರತೆ ಮತ್ತು ಸಾಕ್ಷರತೆಗೆ ಇರುವ ವ್ಯತ್ಯಾಸವನ್ನು ತಿಳಿಸುವುದರ ಜೊತೆಗೆ ಪ್ರತಿಯೊಬ್ಬ ಪ್ರಜೆಯು ಕಾನೂನು ಸಾಕ್ಷರರಾಗಬೇಕು. ರ‍್ಯಾಗಿಂಗ್ ವಿರೋಧ ಕಾನೂನು ರಚಿಸಲು ಕಾರಣವೇನೆಂದು ತಿಳಿಸಿ, ಸೈಬರ್ ಕ್ರೈಂ ಜಾರಿಗೆ ಬಂದ ವರ್ಷ ಮತ್ತು ಅದರಿಂದ ಆಗುವ ಪರಿಣಾಮಗಳನ್ನು ಮತ್ತು ಅದರ ವಿಧಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು. ಮಹಾವಿದ್ಯಾಲಯದ ವತಿಯಿಂದ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ವಕೀಲರಾದ ಶ್ರೀ ಎಫ್. ಪಿ. ಲಕ್ಷ್ಮೇಶ್ವರಮಠ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ರ‍್ಯಾಗಿಂಗ್ ಕಾಲೇಜುಗಳಲ್ಲಿ ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕವಾಗಿದೆ. ಇದೊಂದು ಅಪರಾಧವಾಗಿದೆ ಮತ್ತು ವಿದ್ಯಾರ್ಥಿಗಳ ಜೀವನದ ಮೇಲೆ ಆಳವಾದ ಋಣಾತ್ಮಕ ಪ್ರಭಾವ ಬೀರುತ್ತದೆ. ಇದು ನಂಬಿಕೆ, ಆತ್ಮವಿಶ್ವಾಸ, ಮತ್ತು ಮಾನವೀಯತೆಯನ್ನು ಹಾನಿಗೊಳಿಸುತ್ತದೆ. ಇಂತಹ ಕ್ರೂರಿ ಚಟುವಟಿಕೆಗಳಿಂದ ದೂರವಿರಬೇಕು ಮತ್ತು ಅದು ನಮ್ಮ ಮುಂದೆ ನಡೆದರೆ ತಕ್ಷಣವೇ ವರದಿ ಮಾಡಬೇಕು. ವಿಶ್ವದಲ್ಲಿ ಇಂದು ಸೈಬರ್ ಅಪರಾಧಗಳು ಹೆಚ್ಚುತ್ತಿರುವುದು ಸತ್ಯ. ವಂಚನೆ, ಐಡಿ ಕಳವು, ನಕಲಿ ಖಾತೆಗಳು ಮತ್ತು ಹ್ಯಾಕಿಂಗ್ ಮೊದಲಾದವುಗಳು ನಮ್ಮ ಮಾಹಿತಿಯನ್ನು ಅಪಾಯದಲ್ಲಿಡುತ್ತವೆ. ನಮ್ಮ ಖಾಸಗಿ ಮಾಹಿತಿ ಮತ್ತು ಸಂವೇದನಾಶೀಲ ಡೇಟಾ ಸುರಕ್ಷಿತವಾಗಿರಿಸಲು ನಾವು ಎಚ್ಚರಿಕೆಯಿಂದ ಇರುವುದು ಅಗತ್ಯವಿದೆ. ಇಂತಹ ಅಪರಾಧಗಳನ್ನು ಕಂಡುಬಂದರೆ ತಕ್ಷಣವೇ ಸೈಬರ್ ಕ್ರೈಂ ಗೆ ವರದಿ ಮಾಡಬೇಕು ಎಂದು ಹೇಳಿ, ಇದಕ್ಕೆ ಸಂಭಂದಿಸಿದ ತಮಗಾದ ಒಂದೆರಡು ಅನುಭವಗಳನ್ನು   ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ  ಪ್ರಶಿಕ್ಷಣಾರ್ಥಿಯಾದ ನಂದಿನಿ  ರ‍್ಯಾಗಿಂಗ್ ವಿರೋಧದ ಕುರಿತು ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ  ಮಹಾವಿದ್ಯಾಲಯದ  ಉಪನ್ಯಾಸಕರಾದ ಶ್ರೀ ವಿ. ಪಿ. ಪಾಟೀಲ, ಶ್ರೀ ಎನ್. ಜಿ. ಚನ್ನಪ್ಪಗೌಡ್ರ, ಶ್ರೀ ಬಸವರಾಜ ಕರಬಿಷ್ಠಿ, ಶ್ರೀ ಶಶಿಧರ ಹೊಸಳ್ಳಿ ಮತ್ತು ಮಹಾವಿದ್ಯಾಲಯದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಯಾದ  ಆಫ್ರಿನ್ ಮತ್ತು ವಿನೋದ್ ಕಾರ್ಯಕ್ರಮವನ್ನು ನಿರೂಪಿಸಿದರು, ಸಮ್ರೀನ್ ಮತ್ತು ಜ್ಯೋತಿ ಪ್ರಾರ್ಥಿಸಿದರು,  ಸೌಜನ್ಯ ಮತ್ತು ವಿಜಯ ಸ್ವಾಗತಿಸಿದರು ಮತ್ತು  ಮೇಘನಾ ಮತ್ತು ಬೃಂದಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net