ಬೆಳಧಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ

WhatsApp Image 2024-08-03 at 6.06.43 PM
Published on

Gadag: ನಾಗಾವಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಸಿದ್ರಾಮೇಶ್ವರ ನಗರ (ನಾಗಾವಿ ತಾಂಡಾ) ಇಲ್ಲಿ ಬೆಳಧಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಊರಿನ ಸ.ಹಿ.ಪ್ರಾ. ಶಾಲೆ ಸಿದ್ರಾಮೇಶ್ವರ ನಗರದಲ್ಲಿ ಕ್ರೀಡಾ ಪ್ರತಿಜ್ಞಾ ವಿಧಿ ಬೋಧನೆಯೊಂದಿಗೆ ಅತೀ ವಿಜೃಂಭಣೆಯಿAದ ಜರುಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀ ಸುರೇಶ ಪವಾರ ಹಾಗೂ ಹಿರಿಯರಾದ ಕುಬೇರಪ್ಪ ರಾ. ರಾಠೋಡ, ಯಮನಪ್ಪ ಬಾಗಲಕೋಟ, ಶ್ರೀಮತಿ ಗೌರಿ ತೋಟದ, ಕವಿತಾ ಪವಾರ, ಶ್ರೀಮತಿ ಮೀರಾಬಾಯಿ ಲಮಾಣಿ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸೋಮಪ್ಪ ಪವಾರ, ಉಪಾಧ್ಯಕ್ಷರಾದ ಸಂಗೀತಾ ಚವ್ಹಾಣ ಹಾಗೂ ಸರ್ವ ಸದಸ್ಯರು, ಊರಿನ ಹಿರಿಯರು, ಯುವಕರು, ಶಿಕ್ಷಣ ಪ್ರೇಮಿಗಳು ಸೇರಿ ಈ ಪಂದ್ಯಾಟವನ್ನು ಯಶಸ್ವಿಗೊಳಿಸಿದರು.
ಕ್ಲಸ್ಟರಿನ ವಿವಿಧ ಶಾಲೆಗಳಿಂದ ಮಕ್ಕಳು ವೈಯಕ್ತಿಕ ಹಾಗೂ ಗುಂಪ ಕ್ರೀಡೆಗಳನ್ನು ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದರು. ಶ್ರೀ ಟಿ.ಎಸ್. ಪವಾರ ತಾಲೂಕ ದೈಹಿಕ ಶಿಕ್ಷಣಾಧಿಕಾರಿಗಳು, ಜೆ.ಎ. ಭಾವಿಕಟ್ಟಿ, ಬಿ.ಆರ್.ಸಿ. ಸಮನ್ವಯ ಅಧಿಕಾರಿಗಳು, ಶ್ರೀ ವಿ.ಸಿ. ನರೇಗಲ್‌ಮಠ, ಶ್ರೀ ಬಿ.ವಾಯ್. ಹುಡೇದಮನಿ, ಸಿ.ಆರ್.ಪಿ.ಗಳು ಭಾಗವಹಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಾಯ್.ಬಿ. ರೇವಣಕಿ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಎಸ್.ವಿ. ದಂಡಗಿ ಪ್ರಾರ್ಥನೆ ಗೈದರು. ಶ್ರೀಮತಿ ಪಿ.ಐ. ತಳೆವಾಡ ಹಾಗೂ ಎಸ್.ಬಿ. ಕದಾಂಪೂರ ಶಿಕ್ಷಕಿಯರು ಕಾರ್ಯಕ್ರಮವನ್ನು ನಿರೂಪಿಸಿದರು. ಕ್ಲಸ್ಟರಿನ ಸಿ.ಆರ್.ಪಿ.ಗಳಾದ ಸಿ.ಬಿ. ಪಾಟೀಲ ಪ್ರಾಸ್ತಾವಿಕ ನುಡಿಗಳನ್ನು ನುಡಿದು, ಕಾರ್ಯಕ್ರಮದ ಕೊನೆಯಲ್ಲಿ ತನು, ಮನ, ಧನದಿಂದ ಸಹಾಯ, ಸಹಕಾರ ನೀಡಿದರು. ತಾಂಡಾದ ನಾಯಕರು ಢಾವರವರು ಕಾರಭಾರಿಯವರು ಹಾಗೂ ದಾನಿಗಳನ್ನು ಸನ್ಮಾನಿಸಿ, ವಂದನೆ ಗೈದರು.
ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ನಿರ್ಣಯಕರಾಗಿ ಆಗಮಿಸಿದ ದೈಹಿಕ ಶಿಕ್ಷಕ, ಶಿಕ್ಷಕಿಯರು ಉತ್ತಮ ಪ್ರತಿಭಾವಂತ ಕ್ರೀಡಾಪಟುಗಳನ್ನು ತಾಲೂಕ ಹಂತಕ್ಕೆ ಆಯ್ಕೆ ಮಾಡಿದರು. ನಿರ್ಣಾಯಕರ ನಿರ್ಣಯಕ್ಕೆ ಕ್ರೀಡಾಪಟುಗಳೆಲ್ಲರೂ ತಲೆಬಾಗಿ ಕ್ರೀಡಾ ಸ್ಪೂರ್ತಿಯನ್ನು ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net