ಇಷ್ಟಪಟ್ಟು ಅಧ್ಯಯನ ಮಾಡಿದರೆ ಕಷ್ಟವಿಲ್ಲದೆ ಯಶಸ್ಸು ಸಾಧಿಸಬಹುದು: ಡಾ. ಶ್ವೇತಾ ಸಂಕನೂರ

03GDG04
ಗದಗ ನಗರದ ಎಂ. ಬಿ. ಹುಯಿಲಗೋಳ ಶಿಣ ಸಂಸ್ಥೆಯಲ್ಲಿ ಶನಿವಾರ ವಿದ್ಯಾಥಿರ್ ಸಂದ ಉದ್ಘಾಟನೆ ಮತ್ತು ಪಿಯುಸಿ ವಿದ್ಯಾಥಿರ್ನಿಯರ ಸ್ವಾಗತ ಕಾರ್ಯಕ್ರಮ ಜರುಗಿತು. ಡಾ. ಬಿ. ಎಸ್​. ರಾಠೋಡ, ಭೂಮಿಕಾ ಚವ್ಹಾಣ, ಮೆಹಕ ಕೊಪ್ಪಳ, ಕರಿಯಮ್ಮ ಕುರಿ, ಬಿ. ಬಿ. ಮಿಜಿರ್, ಪ್ರಶಾಂತ ಪಾಟೀಲ, ವೆಂಕಟೇಶ ರಾಠೋಡ, ಹೇಮಂತ ದಳವಾಯಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿದ್ಯಾರ್ಜನೆಯ ಹಂತವು ಮಹತ್ವದ ಟ್ಟವಾಗಿದೆ. ಈ ಸಮಯದಲ್ಲಿ ವಿದ್ಯಾಥಿರ್ಗಳು ಇಷ್ಟಪಟ್ಟು ಅಧ್ಯಯನ ಮಾಡಿದರೆ ಕಷ್ಟವಿಲ್ಲದೆ ಯಶಸ್ಸು ಸಾಧಿಸಬಹುದು ಎಂದು ಸಂಕನೂರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅರವಳಿಕೆ ಹಾಗೂ ನೋವು ನಿವಾರಣಾ ತ ಡಾ. ಶ್ವೇತಾ ಸಂಕನೂರ ಹೇಳಿದರು.
ನಗರದ ಎಂ.ಬಿ.ಹುಯಿಲಗೋಳ ಸಂಸ್ಥೆಯಲ್ಲಿ ಶನಿವಾರ ವಿದ್ಯಾಥಿರ್ ಸಂದ ಉದ್ಘಾಟನೆ ಮತ್ತು ಪಿಯುಸಿ ವಿದ್ಯಾಥಿರ್ನಿಯರ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾಥಿರ್ನಿಯರಲ್ಲಿ ಶ್ರದ್ಧೆ ಮತ್ತು ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತಿದೆ. ಇದರಿಂದ ಹೊರಬರಲು ಜಪಾನಿನ ಇಕಿಗಾಯಿ ವ್ಯಕ್ತಿತ್ವ ವಿಕಸನ ತಂತ್ರ ಸಹಕಾರಿಯಾಗಿದೆ. ಈ ತಂತ್ರದ ಅನುಸಾರವಾಗಿ ವಿದ್ಯಾಥಿರ್ಗಳು ತಮ್ಮ ಆಸಕ್ತಿಯನ್ನು ಗುರುತಿಸಿಕೊಳ್ಳಬೇಕು. ತಮ್ಮ ಆಸಕ್ತಿ ಮತ್ತು ಅಭಿರುಚಿಗೆ ಅನುಸಾರವಾಗಿ ಗುರಿಯನ್ನು ಇಟ್ಟಕೊಂಡು ಆ ಗುರಿಯ ಸಾಧನೆಗಾಗಿ ನಿರಂತರ ಶ್ರಮಿಸಬೇಕು. ಅಧ್ಯಯನ ಮತ್ತು ಉತ್ತಮ ಹವ್ಯಾಸಗಳ ಮೂಲಕ ನಮ್ಮ ಬದುಕನ್ನು ರೂಫಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಮುಕ್ತಾ ಉಡುಪಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾಥಿರ್ ಜೀವನದಲ್ಲಿ ಪದವಿಪೂರ್ವ ಹಂತವು ಸ್ಥಿತ್ಯಂತರದ ಟ್ಟವಾಗಿದೆ. ಈ ಸಮಯದಲ್ಲಿ ವಿದ್ಯಾಥಿರ್ನಿಯರು ಸಮಯ ವ್ಯರ್ಥಮಾಡದೇ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಬೇಕು ಆಥಿರ್ಕವಾಗಿ ಸಬಲರಾಗಿ ಜೀವನದಲ್ಲಿ ಯಶಸ್ಸು ಹೊಂದಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯತೆ ವಹಿಸಿದ್ದ ವಿದ್ಯಾದಾನ ಸಮಿತಿ ಕಾರ್ಯದಶಿರ್ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮತ್ತು ಧಾವಂತದ ಜೀವನದಲ್ಲಿ ವಿದ್ಯಾಥಿರ್ಗಳು ಮಾನವೀಯ ಮೌಲ್ಯ ಮತ್ತು ಕುಶಲ ಕೌಶಲ್ಯ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.
ಪಿಯುಸಿ ಪರೀೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾಥಿರ್ನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ. ಬಿ. ಎಸ್​. ರಾಠೋಡ, ಭೂಮಿಕಾ ಚವ್ಹಾಣ, ಮೆಹಕ ಕೊಪ್ಪಳ, ಕರಿಯಮ್ಮ ಕುರಿ, ಬಿ. ಬಿ. ಮಿಜಿರ್, ಪ್ರಶಾಂತ ಪಾಟೀಲ, ವೆಂಕಟೇಶ ರಾಠೋಡ, ಹೇಮಂತ ದಳವಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net