

ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ, ಹೆದ್ದಾರಿ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿದೆ. ವಾಹನಗಳ ರಸ್ತೆ ಸಂಚಾರಕ್ಕೆ ಮತ್ತು ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ.ಅದರಿಂದ ಅವಘಡಗಳು ಅಪಾಯಗಳು ಜರುಗುತ್ತಿವೆ,ಈ ಕುರಿತು ನಗರಸಭೆಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಸ್ವೀಕೃತವಾಗಿವೆ. ಬೀದಿಗಳಲ್ಲಿ ಬಿಟ್ಟಿರುವ ದನಗಳನ್ನು ಕೂಡಲೇ ಸಂಬಂಧಿಸಿದ ದನಕರುಗಳ ಮಾಲಿಕರು ಅಗಷ್ಟ 5 ರೊಳಗಾಗಿ ಮಾಲಿಕರು ತಮ್ಮ ತಾಬಾಕ್ಕೆ ತೆಗೆದುಕೊಂಡು, ನಗರದ ಬೀದಿಗಳಲ್ಲಿ ಸಂಚರಿಸಿದಂತೆ ನೋಡಿಕೊಳ್ಳಬೇಕು. ಇಲ್ಲದಿದಲ್ಲಿ ಅಂತಹ ಬೀದಿ-ದನಕರಗಳನ್ನು ಹಿಡಿದು ಪಶುಪಾಲನ ಕೇಂದ್ರಕ್ಕೆ ಕಳುಹಿಸಲಾಗುವುದು. ನಂತರ ಯಾವುದೇ ತಕರಾರು ಆಕ್ಷೇಪಣೆ ಪರಿಗಣಿಸಲಾಗುವುದಿಲ್ಲ ಮತ್ತು ಮುಂದಾಗುವ ಹಾನಿಗಳಿಗೆ ನಗರಸಭೆ ಜವಬ್ದಾರರಾಗಿರುವುದಿಲ್ಲ ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.