ಕಟ್ಟಡ ಕಾಮಿರ್ಕರ ಮಕ್ಕಳ ವಿದ್ಯಾಭ್ಯಾಸ ಸಹಾಯಧನ ಕಡಿತ: ಎಂ. ಎಂ. ಹಿರೇಮಠ ಆರೋಪ

27GDG02
Published on

ಗದಗ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಟ್ಟಡ ಕಾಮಿರ್ಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ ನೀಡುತ್ತಿದ್ದ ಸಹಾಯಧನ ಅನುದಾನವನ್ನು ಇಂದಿನ ಕಾಂಗ್ರೆಸ್​ ಕಡಿತಗೊಳಿಸಿ, ಕಟ್ಟಡ ಕಾಮಿರ್ಕರ ಮಕ್ಕಳಿಗೆ ಚಿಪ್ಪು ಕೊಟ್ಟಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ. ಎಂ.ಹಿರೇಮಠ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಸವಾರಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಎಲ್​ಕೆಜಿ, ಯುಕೆಜಿ ಮಕ್ಕಳಿಗೆ ಪ್ರತಿ ವರ್ಷ 5 ಸಾವಿರ ರೂಪಾಯಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಡುತ್ತಿದ್ದರು. ಆದರೆ, ಕಾಂಗ್ರೆಸ್​ ಸರ್ಕಾರ ಅನುದಾನವನ್ನೇ ನೀಡಿಲ್ಲ. ಬಿಜೆಪಿ ಸರ್ಕಾರ 1 ರಿಂದ 4ನೇ ತರಗತಿ ವರೆಗಿನ ಕಟ್ಟಡ ಕಾಮಿರ್ಕ ಮಕ್ಕಳಿಗೆ ನೀಡುತ್ತಿದ್ದ 5 ಸಾವಿರ ರೂ. ಸಹಾಯಧನವನ್ನು ಕಡಿತಗೊಳಿಸಿ 1800 ರೂ. ಗಳಿಗೆ ಇಳಿಸಿರುವರು. ಅದೇ ರೀತಿ 5 ರಿಂದ 8ನೇ ತರಗತಿ ವರೆಗೆ ನೀಡುತ್ತಿದ್ದ 8 ಸಾವಿರ ರೂ.ವನ್ನು ಕಡಿತಗೊಳಿಸಿ 2400 ರೂ. ಗೆ ಕಡಿತಗೊಳಿಸಿದ್ದಾರೆ. ಪಾಲಿಟೆಕ್ನಿಕ್​, ಡಿಪ್ಲೊಮಾ, ಐಟಿಐ ವಿದ್ಯಾಥಿರ್ಗಳ ಅನುದಾನವನ್ನು 20 ಸಾವಿರದಿಂದ 4600 ರೂ. ಕಡಿತಗೊಳಿಸಿದ್ದಾರೆ. ಇನ್ನೂಳಿದ ಕೋರ್ಸ್​ಗಳಿಗೂ ಬಿಜೆಪಿ ಅವಧಿಯಲ್ಲಿ ನೀಡಿದ್ದ ಸಹಾಯಧನವನ್ನು ಕಅಂಗ್ರೆಸ್​ ಕಡಿತಗೊಳಿಸಿ, ರಾಜ್ಯ ಸರ್ಕಾರ ಕಟ್ಟಡ ಕಾಮಿರ್ಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿದ್ದ ಸಹಾಯಧನವನ್ನು ಬಹಳಷ್ಟು ಕಡಿಮೆ ಮಾಡಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿದೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net