23ನೇ ವಾರ್ಡಿನಲ್ಲಿ ಸೊಳ್ಳೆ ನಿಯಂತ್ರಣ ಫಾಗೀಂಗ್ ಕಾರ್ಯಾಚರಣೆ

IMG-20240715-WA0184
Published on

ಗದಗ: ಇಂದು ಅವಳಿ ನಗರವಾದ  ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಜನಪ್ರಿಯ ನಗರಸಭಾ ಸದಸ್ಯರಾದ ಜನಾಬ ಬರಕತಲಿ ಮುಲ್ಲಾ ನೇತ್ರತ್ವದಲ್ಲಿ ಮಾರಕ ಡ್ಯೆಂಗ್ಯೂ ಖಾಯಿಲೆ ಹರಡುವಿಕೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಗದಗ ಬೆಟಗೇರಿ ನಗರಸಭೆಯ ಸಂಯುಕ್ತಾಶ್ರಯದಲ್ಲಿ ಸೊಳ್ಳೆ ನಿಯಂತ್ರಣ ಫಾಗೀಂಗ್ ಕಾರ್ಯಾಚರಣೆಯನ್ನು 23ನೇ ವಾರ್ಡಿನ ಒಕ್ಕಲಗೇರಿ ಓಣಿಯ 3 ನೇ ನಂಬರ ಶಾಲೆಯ ಹತ್ತಿರದ ಬಡಾವಣೆಯಲ್ಲಿ ಸೊಳ್ಳೆ ನಿಯಂತ್ರಣ ಹೊಗೆ ಸಿಂಪಡನೆ ಮಾಡುವ ಮೂಲಕ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಎಸ್ ಪಿ ಹಿರೇಮಠ, ನಿಂಗಪ್ಪ ಎನ್ ಕಮತರ, ಶ್ರೀಮತಿ ಲಲಿತಾ ಬಾಗಿ, ಶಿವಪುತ್ರಪ್ಪ ಅಂಗಡಿ, ಮೆಹಬೂಬ ಈಟಿ,ಮಾಬುಸಾಬ ಅಡರಕಟ್ಟಿ,  ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಸೌಜನ್ಯತಾ ಸಮಗ್ರ ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ  ಶ್ರೀಮತಿ ಸಹನಾ ರಾಘವೇಂದ್ರ ಪಾಲನಕರ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net