ಕಳೆಯಿತು 2024! ಶುಭವಾಗಲಿ 2025 - Series -1

IMG-20241227-WA0035
Published on

ಮರೆಯಾಗಲಿ ಕಹಿ ಟನೆ! ಮರೆಯದಿರಲಿ ಶುಭ ಳಿಗೆ

ಶಿವಾನಂದ ಹಿರೇಮಠ, ಗದಗ

ಇನ್ನೂ ಕೆಲವೇ ದಿನಗಳಲ್ಲಿ 2024 ಕ್ಯಾಲೆಂಡರ್​ ವರ್ಷ ಕೊನೆಗೊಳ್ಳಲಿದೆ. ಎಂದಿನಂತೆ ಹೊಸ ಕ್ಯಾಲೆಂಡರ್​ ವರ್ಷದ ಸ್ವಾಗತಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹಲವು ನೆನಪಿನ ಬುತ್ತಿಗಂಟಿನೊಂದಿಗೆ 2024 ಕೊನೆಗೊಳ್ಳುವ ಮುಂಚೆ ನೆನಪುಗಳನ್ನು ಮೆಲಕು ಹಾಕೋಣ. ನಗರಸಭೆ ಅಕ್ರಮ, ಮರಳು ದಂಧೆ, ಮುಗಿಯದ ಕಳಸಾ ಬಂಡೂರಿ ಯೋಜನೆ, ಬಜೆಟ್​ನಲ್ಲಿ ಜಿಲ್ಲೆಗೆ ಏನು ಎಂಬ ಕಹಿ&ಸಿಹಿ ಅನುಭವಗಳನ್ನು ಮತ್ತೊಮ್ಮೆ ಸ್ಮರಿಸಿ 2024ಕ್ಕೆ ವಿಧಾಯ ಹೇಳೋಣ.

ನಗರಸಭೆಯಲ್ಲಿ ನಾನಾ ವಿಗ್ನಗಳು:

ವರ್ಷದ ಆರಮಭದಲ್ಲೇ ನಗರಸಭೆಯಲ್ಲಿ ನಾನಾ ಪ್ರಕರಣಗಳು ಬೆಳಕಿಗೆ ಬಂದವು. ಪ್ರತಿ ತಿಂಗಳು ಅಂದಾಜು 45 ಲಕ್ಷ ರೂ. ಕೊರತೆ ಅನುಭವಿಸುತ್ತಿರುವ ನಗರಸಭೆ ಸಾಮಾನ್ಯ ನಿಧಿಯಿಂದ ವಾಷಿರ್ಕ 1 ಕೋಟಿಗೂ ಅಧಿಕ ವೆಚ್ಚದ ಬೀದಿ ದೀಪ ನಿರ್ವಹಣೆ ಗುತ್ತಿಗೆಯಲ್ಲಿ ಭ್ರಷ್ಟಾಚಾರದ ಪ್ರಕರಣ 2024ರ ಜನವರಿಯಲ್ಲಿ ಬೆಳಕಿಗೆ ಬಂದಿತ್ತು. ಆಥಿರ್ಕ ಬಿಡ್​ ತೆರೆಯುವ ಪೂರ್ವದಲ್ಲೇ ಗುತ್ತಿಗೆ ದರಕ್ಕೆ ಅನುಮೋದನೆ ನೀಡಿದ್ದ ಪ್ರಕರಣ ಜಿಲ್ಲೆಯಾದ್ಯಂತ ಸದ್ದು ಮಾಡಿತ್ತು. ನಗರಸಭೆ ಅಂದಿನ ಅಧಿಕಾರಿಗಳಿಗೆ ಜಿಲ್ಲಾಡಳಿತು ಕೆಸಿಎಸ್​ ನಿಯಮಗಳ ಪ್ರಕಾರ ಅಗತ್ಯ ಶಿಸ್ತು ಕ್ರಮಕ್ಕೆ ಶಿಾರಸ್ಸು ಮತ್ತು ಕ್ರಮದ ಎಚ್ಚರಿಕೆ ನೀಡಿತ್ತು. ವಿಜಯವಾಣಿ ದಿನಪತ್ರಿಕೆ ನಿರಂತರ ವರದಿ ಪರಿಣಾಮ ಬೀದಿ ದೀಪ ನಿರ್ವಹಣೆ ಟೆಂಡರ್​ ಅನ್ನು ಜಿಲ್ಲಾಡಳಿತ ರದ್ದು ಮಾಡಿತ್ತು.

ನಿಯಮ ಬಾಹಿರ ಹಕ್ಕುಪತ್ರ:

ಗದಗ ಬೆಟಗೇರಿ ನಗರಸಭೆಯಲ್ಲಿ ಅಭಿವೃದ್ಧಿ ಕಾಣದ ನಿವೇಶನಗಳಿಗೂ ಫಾರ್ಮ ನಂ 3(ಹಕ್ಕು ಬದಲಾವಣೆ ಪತ್ರ/ ಉತಾರ) ವಿತರಣೆ ಮಾಡಿದ ಬಹುದೊಡ್ಡ ಭ್ರಷ್ಟಾಚಾರ ಬಯಲಾಯಿತು. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ನೀಡುವ ನಿರಪೇಾ ಪತ್ರ (ಸಿಸಿ) ಇಲ್ಲದಿದ್ದರೂ ನಗರಸಭೆಯಲ್ಲಿ ಉತಾರ ನೀಡಿದ ಪ್ರಕರಣ ಇದಾಗಿದೆ. ಹೀಗೆ ಸಿಸಿ ಇಲ್ಲದೆ 1063 ನಿವೇಶನಗಳಿಗೆ ಗದಗ ಬೆಟಗೇರಿ ನಗರಸಭೆ 2023& 2024ನೇ ಸಾಲಿನಲ್ಲಿ ಫಾರ್ಮ 3 ವಿತರಣೆ ಮಾಡಿತ್ತು. ಅಕ್ರಮ ಬಯಲಾಗುತ್ತಿದ್ದಂತೆ ಎಚ್ಚೆತ್ತ ನಗರಸಭೆ ನಿಯಮಗಳನ್ನು ಪಾಲಿಸುತ್ತಿದೆ.

6 ತಿಂಗಳು ಖಾಲಿ ಇತ್ತಯ ಜಿಪಂ ಸಿಇಒ ಹುದ್ದೆ:

ಪ್ರಸಕ್ತ ವರ್ಷ ಜಿಪಂ ಸಿಇಒ ಹುದ್ದೆ 6 ತಿಂಗಳುಗಳ ಕಾಲ ಖಾಲಿ ಇತ್ತು ಎಂಬುದೇ ವಿಶೇಷ. ಗದಗ ಜಿಪಂ ಸಿಇಒ ಆಗಿದ್ದ ಬಿ. ಸುಶೀಲಾ ಅವರು 2023 ಜು. 18 ರಂದು ಯಾದಗಿರಿ ಜಿಲ್ಲಾಕಾಧಿರಿಯಾಗಿ ವರ್ಗಾವಣೆ ಆಗಿದ್ದಾರೆ. ಅಂದಿನಿಂದ 6 ತಿಂಗಳ ವರೆಗೆ ಹುದ್ದೆ ಖಾಲಿ ಇತ್ತು. ಜಿಲ್ಲಾಧಿಕಾರಿ ಆಗಿದ್ದ ವೈಶಾಲಿ ಎಂ.ಎಲ್​. ಅವರು ಸಿಇಒ ಹುದ್ದೆ ಪ್ರಭಾರ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಬರಗಾಲ ನಿರ್ವಹಣೆಯಲ್ಲಿ ಜಿಪಂ ಸಿಇಓ ಹುದ್ದೆ ಅತ್ಯಂತ ಪ್ರಮುಖವಾಗಿತ್ತು. 6 ತಿಂಗಳು ಖಾಲಿ ಇದ್ದದ್ದು ಏಕೆ ಎಂಬ ಯಕ್ಷ ಪ್ರಶ್ನೆಗೆ ಜಿಲ್ಲೆಯಲ್ಲಿ ಇನ್ನೂ ಉತ್ತರ ಸಿಗದಂತಾಗಿದೆ.

ಅಕ್ರಮ ನೇಮಕಾತಿ:

ನಗರಸಭೆ ಪದವಿಪೂರ್ವ ಕಾಲೇಜಿನಲ್ಲಿ ಖಾಲಿ ಇದ್ದ ದೈಹಿಕ ಶಿಕ್ಷಕ ನೇಮಕಾತಿಯಲ್ಲಿ 40 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಅಬ್ಬರಿಸಿ ಬೊಬ್ಬೆರದ ನಗರಸಭೆ ಪ್ರತಿಪಕ್ಷವು ಕಾಳ ಕಳೆದಂತೆ ಮೌನವಾಗಿದ್ದು ನಗರಾದ್ಯಂತ ಹಲವು ಅನುಮಾನಗಳನ್ನು ಸೃಷ್ಟಿಸಿತು. ಮೆರಿಟ್​ ಆಧಾರದಲ್ಲಿ ನೇಮಕವಾಗುವ ಶಿಕ್ಷಕರ ನೇಮಕಾತಿಯ ಅಂಕಗಳನ್ನು ಶೇ. 55ಕ್ಕೆ ಮಿತಿಗೊಳಿಸಿ ನೋಟೀಫಿಕೇಷನ್​ ಹೊರಡಿಸಿದ್ದು ನಗರಸಭೆಯ ಮೊದಲ ಪ್ರಮಾದವಾಗಿದೆ ಎಂಬುದು ವಿಪಕ್ಷದ ಆರೋಪವಾಗಿತ್ತು. ಮೆರಿಟ್​ ಮೇಲೆ ನೇಮಕ ಮಾಡಬೇಕು ಎಂಬುದು ಸರ್ಕಾರದ ನಿಯಮವೇ ಇದೆ. ಇಲ್ಲಿ ಸರ್ಕಾರದ ನಿಯಮ ಉಲ್ಲಂನೆ ಆಗಿದೆ ಎಂದು ಕಾಂರೆಸ್​ ಆರೋಪಿಸಿತ್ತು.

ದರ ದುಪ್ಪಟ್ಟು:

ರಾಜ್ಯ ಸರ್ಕಾರ ನೋಂದಣಿ ದರಗಳನ್ನು ಏಕಾಏಕಿ ದುಪ್ಪಟ್ಟು ಮಾಡಿದ ಹಿನ್ನೆಲೆ ಜಿಲ್ಲೆಯ ರೈತಾಪಿ ವರ್ಗ ತೊಂದರೆ ಅನುಭವಿಸಿದೆ. ಸಾಮನ್ಯ ಅಫೀಡವಿಟ್​ ಪಡೆಯಲು ಈ ಮೊದಲು 20 ರೂ. ಸ್ಟಾಂಪ್​ ಬಳಸಲಾಗುತ್ತಿತ್ತು. ಹೊಸ ದರದ ಅನ್ವಯ 100 ರೂ. ಸ್ಟಾಂಪ್​ ಕಡ್ಡಾಯವಾಗಿದೆ. ವಿವಿಧ ಪರಿಕರಗಳನ್ನು ಸಹಾಯಧನದಲ್ಲಿ ಪಡೆಯಲು 20 ರೂ. ಬದಲಾಗಿದೆ 100 ರೂ. ಸ್ಟಾಂಪ್​(ನೋಟರಿ) ಮಾಡಿಸುವುದು ಕಡ್ಡಾಯವಾಗಿದೆ. ಜಮೀನಿನ ಖರೀದಿ, ವಚನ ಪತ್ರಗಳಿಗೆ ಜಮೀನಿನ ಮೂಲ ಮಾರುಕಟ್ಟೆ ದರಕ್ಕೆ ಶೇ.1 ರಷ್ಟು ಭರಿಸಬೇಕಿದ್ದ ದರವನ್ನು ಈಗ ಶೇ 0.5ರಷ್ಟು ಭರಿಸಬೇಕಿದೆ. ರೂ.ಗಳ ಪಾವತಿಯಲ್ಲಿ ಈ ಬೆಲೆ ಲಕ್ಷಕ್ಕೂ ಅಧಿಕವಾಗುವುದರಿಂದ ರೈತರು ಸೇರಿದಂತೆ ಎಲ್ಲ ವರ್ಗಕ್ಕೂ ಹೊರೆ ಆಗಲಿದೆ. ವಿವಿಧ ಪ್ರಾಧಿಕಾರದಿಂದ ಕೇಳಲ್ಪಡಿವ ಮುಚ್ಚಳಿಕೆ ಪತ್ರ, ದತ್ತಕ ಪತ್ರ, ಜನನ ಪ್ರಮಾಣ ಪತ್ರ, ಮೂಲ ದಾಖಲೆ ಪಡೆಯಲು. ಕೋರ್ಟ್​ ಗೆ ಅಫಿಡಿವಿಟ್​ ಸಲ್ಲಿಸಲು ಇನ್ಮುಂದೆ 100 ರೂ. ಸ್ಟಾಂಪ್​ ಕಡ್ಡಾಯ. ರೈತರು ತಮ್ಮ ಹೊಲ ಗದ್ದೆಗಳ ಪಾಲುದಾರಿಕೆ ಪಡೆಯಲು ಈ ಮೊದಲು ಏಕರೆ ಲೆಕ್ಕದಲ್ಲಿ 200 ರೂ. ನಿಂದ 1000 ರೂ. ವರೆಗೆ ಸ್ಟಾಂಪ್​ ದರ ಪಾವತಿಸಬೇಕಿತ್ತು. ಈಗ ಪ್ರತಿ ಹಿಸ್ಸಾಗೆ(ಪ್ರತಿ ಪಾಲುದಾರಿಕೆ) 1000 ರೂ. ನಿಂದ 5000 ರೂ. ವರೆಗೆ ಸ್ಟಾಂಪ್​ ದರ ಪಾವತಿಸಲಾಗುತ್ತಿದೆ. ಸ್ಟಾಂಪ್​ ದರದಲ್ಲಿ ಶೇ. 20 ರಷ್ಟು ಏರಿಕೆ ಆಗಿದೆ. ಹೀಗಾಗಿ ರೈತವರ್ಗ ದರಗಳ ಪಾವತಿಯಿಂದ ಬೇಸತ್ತಿದೆ.

2024ರ ಬಜೆಟ್​ನಲ್ಲಿ ಜಿಲ್ಲೆಗೆ ಏನೆನು?

* ಗದಗನಲ್ಲಿ ನೂತನವಾಗಿ ನಿಮಿರ್ಸಿದ 450 ಹಾಸಿಗೆಗಳ ಆಸ್ಪತ್ರೆಗೆ ವೈದ್ಯಕಿಯ ಉಪಕರಣ ಮತ್ತು ಪಿಠೋಪಕರಣ ಖರೀದಿಗೆ ಅನುದಾನ(ಗದಗ, ಕೊಪ್ಪಳ, ಚಾಮರಾಜ ನಗರ ಸೇರಿ 150 ಕೋಟಿ)

* ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ

* ಜಿಲ್ಲೆಯ ರೋಣ ಪಟ್ಟಣದಲ್ಲಿ ನಬಾರ್ಡ್​ ಸಹಯೋಗದೊಂದಿಗೆ 150 ಕೋಟಿ ವೆಚ್ಚದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಸ್ಥಾಪನೆ.

* ಜಿಲ್ಲೆಯ ರೋಣ&ಮಲ್ಲಾಪುರ ರಸ್ತೆ ಅಭಿವೃದ್ಧಿ

* ಗದಗ ಜಿಲ್ಲಾಸ್ಪತ್ರೆಯಲ್ಲಿ 10 ಕೋಟಿ ವೆಚ್ಚದಲ್ಲಿ ಸುಪರ್​ ಸ್ಪೆಷಾಲಿಟಿ ಕಾಡಿರ್ಕ್​ ಟಕ ಸ್ಥಾಪನೆ ಮತ್ತು ಅನಸ್ತೆಷಿಯಾ ಟಕ

* ಗದಗ ಜಿಲ್ಲೆಯ ಜಾಲವಾಡಗಿ ಏತ ನೀರಾವರಿಗೆ ಅನುದಾನ

* ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೀತಲಗೃಹ

* ಜವಳಿ ಪಾರ್ಕ್​, ಶಿರಹಟ್ಟಿ ಯಲ್ಲಿ 100 ಹಾಸಿಗೆ ಸಾಮರ್ಥ್ಯ ತಾಲೂಕು ಆಸ್ಪತ್ರೆ ನಿರ್ಮಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net