ಸದಾ ನಿಮ್ಮ ಸೇವೆಗೆ ಗದಗ ಜಿಲ್ಲಾ ಪೊಲೀಸ್ ತಂಡ ಸಿದ್ಧತೆ :ಎಚ್. ಡಿ. ಓದುಗೌಡರ.

Oplus_131072
Oplus_131072
Published on

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲ್ಲಿ ಮಹಾವಿದ್ಯಾಲಯದ ಲೈಂಗಿಕ ಕಿರುಕುಳ ವಿರೋಧಿ ವಿಭಾಗದಿಂದ ಸಾಮಾಜಿಕ ಜಾಲತಾಣಗಳ ಗೀಳು ಈ ವಿಷಯವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಗದಗ ಮಹಿಳಾ ಪೊಲೀಸ್ ಸ್ಟೇಷನ್ ಪಿ.ಎಸ್.ಐ ಎಚ್ ಡಿ ಓದು ಗೌಡರ ಸಸಿಗೆ ನೀರಿರುವ ಮೂಲಕ ಈ ಒಂದು ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪೊಲೀಸ್ ಇಲಾಖೆ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಸಾಮಾನ್ಯ ನಾಗರಿಕರಿಗೂ ಹತ್ತಿರ ಆಗುತ್ತಿದ್ದು ಯಾವುದೇ ಭಯವಿಲ್ಲದೆ ತಮಗೆ ಅನ್ಯಯವಾದ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು ಈ ಒಂದು ಉದ್ದೇಶದಿಂದ ಒಂದು ಭಾರತ ಒಂದು ತುರ್ತು ಕರೆ ಸಂಖ್ಯೆ ಪರಿಕಲ್ಪನೆ ಅಡಿ ಕರ್ನಾಟಕದಲ್ಲಿ 112 ಸಹಾಯವಾಣಿಯು ಆರಂಭಿಸಲಾಗಿದೆ. 112 ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜನರ ಅಗತ್ಯ ಸೇವೆಗಳನ್ನ ಪಡೆಯಬಹುದು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸ್ ಅಗ್ನಿಶಾಮಕ ಆರೋಗ್ಯ ಮುಂತಾದ ತುರ್ತು ಸೇವೆಗಳನ್ನ ಪಡೆಯಬಹುದು. ದೇಶದಲ್ಲೆಡೆ ಇವತ್ತಿನ ದಿನಮಾನಗಳಲ್ಲಿ ಬಹಳಷ್ಟು ಅನೈತಿಕ ಘಟನೆಗಳು ನಡೆಯುತ್ತಿರುವುದು ಗಮನಿಸುತ್ತಿದ್ದೇವೆ.  ಅನ್ಯಾಯಕ್ಕೆ ಒಳಗದವರಿಗೆ ನ್ಯಾಯ ಒದಗಿಸುವ ಕೆಲಸ ಇಲಾಖೆ ಮಾಡುತ್ತಿದ್ದು ಅದರಲ್ಲೂ ಮಹಿಳಾ ಪೊಲೀಸ್ ವಿಂಗ್ ಕೂಡ ನಿರ್ಮಿಸಲಾಗಿದೆ ಈ ವಿಭಾಗದಲ್ಲಿ ಏನಾದರೂ ಸಮಸ್ಯೆಗಳಾದರೆ ಆ ಸಮಸ್ಯೆಗಳನ್ನು ಫೋನಿನ ಮೂಲಕ ತಿಳಿಸಿದರೆ ಅವರ ಹೆಸರುಗಳನ್ನ ಗೌಪ್ಯವಾಗಿ ಇಟ್ಟು ನ್ಯಾಯವನ್ನು ಒದಗಿಸುವ ಕಾರ್ಯವನ್ನು ಗದಗ ಜಿಲ್ಲಾ ಪೊಲೀಸ್ ಇಲಾಖೆ ಮಾಡುತ್ತಿದ್ದು ಅದರಲ್ಲೂ ಚೆನ್ನಮ್ಮ ಪಡೆ ವೆಹಿಕಲ್ ಮಾಡಲಾಗಿದ್ದು ಸದಾ ನಿಮ್ಮ ಸೇವೆಗೆ ಗದಗ ಜಿಲ್ಲಾ ಪೊಲೀಸ್ ತಂಡ ಸಿದ್ಧವಿದೆ ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು. ಥರ್ಡ್  ಆಯ್, ಮಾದಕ ವಸ್ತುಗಳು ಹೀಗೆ ಅನೇಕ ವಿಚಾರಗಳ ಬಗ್ಗೆ ತಮ್ಮ ಉದ್ಘಾಟನೆ ನುಡಿಯಲ್ಲಿ ಹಂಚಿಕೊಂಡರು.

 ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಹಾಗೂ ಐಕ್ಯೂ ಎಸಿ ಕೋಆರ್ಡಿನೇಟರ್ ಡಾ. ವಿ.ಟಿ ನಾಯ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಗದಗ ಜಿಲ್ಲಾ ಪೊಲೀಸ್ ತಂಡವು ಅನೇಕ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಜಾತ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅಪರಾಧಗಳ ತಡೆಗಟ್ಟುವಿಕೆ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇದೆ ಹೀಗಾಗಿ ವಿಶೇಷ ಧನ್ಯವಾದವನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಬಿ. ಎಸ್ ನೇಮ ಗೌಡರಿಗೆ ಸಲ್ಲಬೇಕು ಕಾರಣ ಗದಗ ಜಿಲ್ಲೆ  ಸುರಕ್ಷಿತವಾಗಿರಲು ಕಾರಣ ಅವರು ಅವರ ತಂಡ ಹಗಲ ಇರುಳು ಶ್ರಮವಹಿಸುತ್ತಿದೆ ನಮ್ಮ ಸಂಸ್ಥೆಯ ಪರವಾಗಿ ಬಿ .ಎಸ್ ನೇಮಗೌಡರ ರವರಿಗೆ ಹಾಗೂ ಅವರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಮ್ಮ ಅಧ್ಯಕ್ಷ ನುಡಿಗಳಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಜೆ ಆರ್ ಕಮತರ್. ವಿಭಾಗದ ಅಧ್ಯಕ್ಷರಾದ ಡಾ. ಎಸ್. ಡಿ ಬಂಡಾರ್ಕರ್,  ವಿದ್ಯಾರ್ಥಿ ಕಾರ್ಯದರ್ಶಿ ಕುಮಾರಿ ಸತ್ಯಮ್ಮ ಬೇಲೇರಿ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net