ಗಬ್ಬೂರು ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ತಹಸೀಲ್ದಾರ್, ಗೈರಾದವರಿಗೆ ಎಚ್ಚರಿಕೆ ನೋಟಿಸ್

171121 Gabburu Nadakacheri Visit Tahasildar
ಗಬ್ಬೂರು ನಾಡ ತಹಸಿಲ್ ಕಚೇರಿಗೆ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಭೇಟಿ ನೀಡಿ ಪರಿಶೀಲಿಸಿದರು.
Published on

ದೇವದುರ್ಗ: ತಾಲೂಕಿನ ಗಬ್ಬೂರು ನಾಡ ತಹಸಿಲ್ ಕಚೇರಿಗೆ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ಬುಧವಾರ ಬೆಳಗ್ಗೆ ದಿಡೀರ್ ಭೇಟಿ ನೀಡಿ ಕೆಲಸಕ್ಕೆ ಗೈರಾದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಬೆಳಗ್ಗೆ 11ಕ್ಕೆ ಕಚೇರಿಗೆ ಭೇಟಿ ನೀಡಿದಾಗ ಉಪ ತಹಸೀಲ್ದಾರ್ ಬಸವರಾಜ, ಎಜಿಎಸ್‌ಕೆ ಅಧಿಕಾರಿ ಸಿದ್ದಲಿಂಗ ಹಾಗೂ ಕಂಪ್ಯೂಟರ್ ಆಪರೇಟರ್ ಚನ್ನಬಸವ ಕಚೇರಿಯಲ್ಲಿ ಇರಲಿಲ್ಲ. ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ಬಂದಿದ್ದರೂ ಕಚೇರಿಯಲ್ಲಿ ಇರಲಿಲ್ಲ. ಇನ್ನಿಬ್ಬರು ಅಧಿಕಾರಿಗಳು ಕೆಲದಿನಗಳಿಂದ ಕಚೇರಿಗೇ ಬಂದಿಲ್ಲ.

ಉಪತಹಸೀಲ್ದಾರ್ ಬಸವರಾಜ ಮೂರ‌್ನಾಲ್ಕು ದಿನಗಳಿಂದ ಬಂದಿಲ್ಲ. ಹಾಜರಾತಿಯಲ್ಲೂ ಸಹಿ ಮಾಡಿಲ್ಲ. ಸಿದ್ದಲಿಂಗ ಏಳು ದಿನಗಳಿಂದ ಕಚೇರಿಗೆ ಬಂದಿಲ್ಲ. ಇದನ್ನು ಗಮನಿಸಿದ ತಹಸೀಲ್ದಾರ್ ಶ್ರೀನಿವಾಸ್ ಚಾಪಲ್, ಹಾಜರಿಯಲ್ಲಿ ಗೈರು ಎಂದು ನಮೋದಿಸಿ, ಎಚ್ಚರಿಕೆ ನೀಡಿದರು. ಈ ಕುರಿತು ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಸಹಾಯಕ ಆಯುಕ್ತರಿಗೆ ಪತ್ರ ಬರೆಯುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.

ಕೆಲಸದ ಮೇಲೆ ಗಬ್ಬೂರಿಗೆ ತೆರಳಿದ್ದಾಗ ನಾಡ ಕಚೇರಿಗೆ ಭೇಟಿ ನೀಡಲಾಯಿತು. ಉಪ ತಹಸೀಲ್ದಾರ್ ಸೇರಿ ಮೂವರು ಅಧಿಕಾರಿಗಳು ಗೈರಾಗಿದ್ದು, ಈ ಬಗ್ಗೆ ನೋಟಿಸ್ ನೀಡಿದ್ದೇನೆ. ಸಹಾಯಕ ಆಯುಕ್ತರಿಗೂ ಪತ್ರ ಬರೆದು ತಿಳಿಸಿವೆ.| ಶ್ರೀನಿವಾಸ್ ಚಾಪಲ್, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net