*ಗಬ್ಬರ್ ಸಿಂಗ್ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ*

uuuuuuuuuuu
Published on


ಮುತ್ತು ಗೋಪಾಲ್ ಫಿಲ್ಮ್ಸ್ ಲಾಂಛನದಲ್ಲಿ ಸತೀಶ್ ಪೂಜಾರಿ ನಿರ್ಮಾಣದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ ಅಡ್ಯಾರ್ ನಲ್ಲಿ ನಡೆದ ಶಿವದೂತೆ ಗುಳಿಗೆ ನಾಟಕದ 555 ನೇ ಪ್ರದರ್ಶನ ಸಮಾರಂಭದಲ್ಲಿ ಜರಗಿತು.
ಸಿನಿಮಾ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಗುರುಕಿರಣ್ ಪೋಸ್ಟ್ ರ್ ಬಿಡುಗಡೆಗೊಳಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂಎನ್ ರಾಜೇಂದ್ರಕುಮಾರ್, ಕನ್ಯಾನ ಸದಾಶಿವ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ ಬೈಲ್, ನಿರೂಪಕಿ ಅನುಶ್ರೀ, ಗಣ್ಯರಾದ ಶಶಿಧರ ಶೆಟ್ಟಿ ಬರೋಡ, ಪದ್ಮರಾಜ್ ಆರ್. ಬಿ.ನಾಗರಾಜ ಶೆಟ್ಟಿ, ಕುಮಾರ ಎನ್. ಬಂಗೇರ, ಹರೀಶ್ ಬಂಗೇರ, ಪ್ರಕಾಶ್ ಪಾಂಡೇಶ್ವರ, ಆರ್.ಕೆ.ನಾಯರ್, ಮನೋಹರ ಪ್ರಸಾದ್, ಕಾಸರಗೋಡು ಚಿನ್ನಾ, ಮತ್ತಿತರರು ಉಪಸ್ಥಿತರಿದ್ದರು. ಗಬ್ಬರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸಿರುವ ಶರಣ್ ಶೆಟ್ಟಿ, ಭೋಜರಾಜ ವಾಂಮಜೂರು, ಗಿರೀಶ್ ಎಂ ಶೆಟ್ಟಿ ಕಟೀಲು, ಉದಯ ಆಳ್ವ, ಸಂಭಾಷಣೆಕಾರ ಮಧು ಸುರತ್ಕಲ್, ಶಿಲ್ಪಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗಬ್ಬರ್ ಸಿಂಗ್ ಮಾಚ್೯ 22 ರಂದು ತೆರೆ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net