ಗಬ್ಬರ್​ ಸಿಂಗ್​ ತುಳು ಸಿನಿಮಾ ಬಿಡುಗಡೆ

udp-3-gabbar sing film
Published on

ಉಡುಪಿ: ಚಂದ್ರಶೇಖರ್​ ನಾನಿಲ್​ ಮತ್ತು ನಾಗೇಶ್​ ಪೂಜಾರಿ ಅರ್ಪಿಸುವ ಮುತ್ತುಗೋಪಾಲ ಫಿಲಂಸ್​ ನಿಮಾರ್ಣದ ಗಬ್ಬರ್​ ಸಿಂಗ್​ ತುಳು ಸಿನಿಮಾ ಕಲ್ಪನಾ ಥಿಯೇಟರ್​ನಲ್ಲಿ ಶುಕ್ರವಾರ ಬೆಳಗ್ಗೆ ಬಿಡುಗಡೆಗೊಂಡಿತು.

ಶಂಕರಪುರ ಸಾಯಿ ಬಾಬ ಮಂದಿರದ ಶ್ರೀ ಸಾಯಿ ಈಶ್ವರ್​ ಗುರೂಜಿ ಪ್ರಥಮ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಅವರು, ತುಳು ಸಿನೆಮಾ ಮೂಲಕ ತುಳು ರಂಗಭೂಮಿ ಪ್ರತಿಭೆಗಳಿಗೆ ಉತ್ತಮ ಅವಕಾಶ ಲಭ್ಯವಾಗುತ್ತಿದೆ. ಹೀಗಾಗಿ ಪ್ರೇಕ್ಷಕರು ತುಳು ಸಿನೆಮಾಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಸುಮಾರು ಸಮಯದಿಂದ ನಿರೀೆಯಲ್ಲಿದ್ದ ಗಬ್ಬರ್​ ಸಿಂಗ್​ ಸಿನೆಮಾ ಬಿಡುಗಡೆಯಾಗುತ್ತಿದ್ದು, ಯಶಸ್ಸು ಕಾಣಲಿ ಎಂದರು.

ತೊಟ್ಟಂ ಚರ್ಚ್​ ಧರ್ಮಗುರು ಡೆನಿಸ್​ ಡೇಸಾ, ಬೆಳಪು ಮಸೀದಿ ಧರ್ಮಗರು ಅಬ್ದುಲ್​ ಹಸನ್​, ನಟ ಸಂದೀಪ್​ ಭಕ್ತ, ನಟಿ ವೀಣಾ ಶೆಟ್ಟಿ, ಬಾಲ ನಟಿ ಬೇಬಿ ಆದ್ಯ, ಪ್ರಮುಖರಾದ ಹರೀಶ್​ ಕಿಣಿ, ಗೀತಾಂಜಲಿ ಸುವರ್ಣ, ಸುಪ್ರಸಾದ್​ ಶೆಟ್ಟಿ, ಸುರೇಶ್​ ನಾಯಕ್​, ಪೂರ್ಣಿಮಾ ಸುರೇಶ್​, ಕೃಷ್ಣಮೂರ್ತಿ ಅಚಾರ್ಯ, ರಮೇಶ್​ ಕಾಂಚನ್​, ಸರಳಾ ಕಾಂಚನ್​, ಶಿಲ್ಪಾ ಆರ್​. ಭಟ್​, ಶಬರೀಶ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net