ಲಕ್ಷಾಂತರ ರೂ. ಮೌಲ್ಯದ ಟೈಲ್ಸ್ ಬಾಕ್ಸ್ ಕಳವು, ನಾಲ್ವರ ಸೆರೆ

7 smg 12
Published on

ಶಿವಮೊಗ್ಗ: ನಗರದ ಗಾಡಿಕೊಪ್ಪದ ಗೋಡೌನ್‌ನ ಮುಂದಿನ ಖಾಲಿ ಜಾಗದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಟೈಲ್ಸ್‌ಗಳನ್ನು ಕಳವು ಮಾಡಿದ್ದ ನಾಲ್ವರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದು, ಎರಡು ಲಕ್ಷ ರೂ. ಮೌಲ್ಯದ 190 ಟೈಲ್ಸ್ ಬಾಕ್ಸ್ ಮತ್ತು ಟ್ರಾಕ್ಟರ್‌ನ್ನು ಜಪ್ತಿ ಮಾಡಿದ್ದಾರೆ.

ತಾಲೂಕಿನ ಆಯನೂರು ಗ್ರಾಮದ ನಿರಂಜನ್ ಅಲಿಯಾಸ್ ನೀತು (26), ಸಂತೆಕಡೂರಿನ ಪಿ.ಸುನೀಲ (24), ಗಾಡಿಕೊಪ್ಪದ ಲಿಖೇಶ್ ನಾಯ್ಕ ಅಲಿಯಾಸ್ ಬಾಟ್ಲಿ (51) ಮತ್ತು ಗಣೇಶ್ ನಾಯ್ಕ (34) ಬಂಧಿತರು.

ಸೆ.25ರಂದು ಗಾಡಿಕೊಪ್ಪದ ಲಕ್ಷ್ಮಣ್ ಮತ್ತು ಕೋಟ್ಯನ್ ಬಿಲ್ಡಿಂಗ್ ಸೆಲ್ಯುಷನ್‌ಗೆ ಸೇರಿದ ಗೋಡೌನ್ ಎದುರಿನ ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಾಣದ ಟೈಲ್ಸ್‌ಗಳನ್ನು ಕಳವು ಮಾಡಲಾಗಿತ್ತು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಬುಧವಾರ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net