ಜಿ 20 ಸಮ್ಮೇಳನ ಕುರಿತ ವಿಚಾರ ಸಂಕಿರಣದಲ್ಲಿ ಮಹತ್ವದ ಚರ್ಚೆ

18cmy6
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕುರುಬೂರು ರೇಷ್ಮೆ ಕೃಷಿ ಮಹಾ ವಿದ್ಯಾಲಯದ ಆವರಣದಲ್ಲಿ ಜಿ-20 ಸಮ್ಮೇಳನ ಹಾಗೂ ಭಾರತದ ಕೃಷಿ ಕ್ಷೇತ್ರದ ಬೆಳವಣೆಗೆ ವಿಚಾರ ಸಂಕಿರಣವು ನಡೆಯಿತು. ಅಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಎ.ಎಸ್.ಶಂಕರನಾರಾಯಣರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಮಾತ್ರ ಒಂದಾದರೆ ಸಾಲದು, ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ರಾಷ್ಟ್ರಗಳನ್ನು ಜತೆಯಲ್ಲಿ ಕರೆದುಕೊಂಡು ಹೋಗಲು ವಿವಿಧ ರಾಷ್ಟ್ರಗಳು ರೂಪಿಸಿಕೊಂಡಿರುವ ಒಪ್ಪಂದವೇ ಜಿ.20. ಭಾರತವು ಇಂದು ಅಭಿವೃದ್ಧಿ ವಲಯದಲ್ಲಿ "ವಿಶ್ವಗುರು"ನ ಸ್ಥಾನವನ್ನು ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಶಂಕರನಾರಾಯಣ ಸಂತಸ ವ್ಯಕ್ತಪಡಿಸಿದರು.                                                            ಭಾರತ ಒಂದು ಕಾಲದಲ್ಲಿ ಸಂಪನ್ಮೂಲ ಇದ್ದರೂ ಬಡ ರಾಷ್ಟ್ರ ಎಂಬ ಹಣೆ ಪಟ್ಟು ಪಡೆದಿತ್ತು. ಇಂದು ಅಭಿವೃದ್ಧಿ ವಿಚಾರವಾಗಿ ಬದಲಾಗಿದೆ ಎಂದ ಅವರು, ಜಿ-20 ಎಂದರೆ ಅಕ್ಕಪಕ್ಕ ರಾಷ್ಟ್ರಗಳು ಯುರೋಪಿಯನ್ ಯೂನಿಯನ್ ರಚಿಸಿದ್ದನ್ನು ಗ್ರೂಪ್-20 ಎನ್ನಲಾಗುತ್ತಿತ್ತು. ಇದಕ್ಕೂ ಮೊದಲು ಏಯನ್ ಗ್ಲೋಬಲ್ ಹೆಸರಿನಲ್ಲಿ ರಾಷ್ಟ್ರಗಳು ಒಂದುಗೂಡುತ್ತಿದ್ದವು. ಇದರಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಮಾತ್ರ ಇರುತ್ತಿದ್ದವು. ಈಗ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಸಹ ಜಿ.20 ಗ್ರೂಫ್‌ನಲ್ಲಿವೆ ಎಂದರು.

ಈ ಬಾರಿ ಭಾರತಕ್ಕೆ ಜಿ-20 ಶೃಂಗ ಸಭೆಯ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿದೆ. ಶೃಂಗಸಭೆಯ ಕಾರ್ಯಸೂಚಿಯನ್ನು ಅನುಷಾನಕ್ಕೆ ತರುವ ಜವಾಬ್ದಾರಿ ಇದ್ದು ಆರ್ಥಿಕ ದುಸ್ಥಿತಿಯನ್ನು ಮೆಟ್ಟಿ ನಿಲ್ಲುವ, ಇತರೆ ಕ್ಷೇತ್ರಗಳಲ್ಲಿ ಬೆಳವಣಿಗೆಗಳು?, ಮುಂದೆ ಏನಾಗಬೇಕು ಎಂಬದರ ಬಗ್ಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ರೇಷ್ಮೆ ಕೃಷಿ ಕಾಲೇಜು ಪ್ರಾಧ್ಯಾಪಕ ಡಾ.ರಾಮಕೃಷ್ಣ ನಾಯಕ, ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಪ್ರವೀಣ್ ಕುಮಾರ್, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರವಿಶಂಕರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net