ದೊಡ್ಡಿಂದುವಾಡಿಯಲ್ಲಿ ಜಿ.ರಾಜುಗೌಡ ಪುಣ್ಯ ಸ್ಮರಣೆ

25-KGLPHOTO-4,,
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿರುವ ಮಾಜಿ ಸಚಿವ ದಿ.ಜಿ.ರಾಜುಗೌಡ ಅವರ ಸಮಾಧಿಗೆ ಆರ್.ನರೇಂದ್ರ ಮತ್ತು ಅವರ ಕುಟುಂಬದವರು ಪೂಜೆ ಸಲ್ಲಿಸಿದರು. ಆಶಾ ನರೇಂದ್ರ, ನವನೀತ್ ಗೌಡ, ನಿಖಿತಾ ಗೌಡ, ಪ್ರವೀಣ್ ಕುಮಾರ್ ಮತ್ತಿತರಿದ್ದರು.
Published on

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಸೋಮವಾರ ಮಾಜಿ ಸಚಿವ ದಿ.ಜಿ.ರಾಜುಗೌಡ ಅವರ 20ನೇ ಪುಣ್ಯ ಸ್ಮರಣೆ ಕಾರ್ಯ ಕ್ರಮ ಆಯೋಜಿಸಲಾಗಿತ್ತು.

ದಿ.ರಾಜುಗೌಡ ಅವರ ಪುತ್ರ ಮಾಜಿ ಶಾಸಕ ಆರ್.ನರೇಂದ್ರ, ಕುಟುಂಬ ವರ್ಗ ಸೇರಿದಂತೆ ನೂರಾರು ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ನಮ್ಮ ತಂದೆ ಶಾಸಕ, ಸಚಿವರಾಗಿ ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಹನೂರು ಕ್ಷೇತ್ರದ ಉದ್ದಗಲಕ್ಕೂ ಬಡವರಿಗೆ ಸಾವಿರಾರು ನಿವೇಶನಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದರು. ಬಡ ಹಾಗೂ ಮಧ್ಯಮ ವರ್ಗ ಜನರಿಗೆ ಅನುಕೂಲವಾಗಲೆಂದು ಸಾಕಷ್ಟು ಕೆಲಸ ಮಾಡಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ನೂರಾರು ಶಾಲೆಗಳನ್ನು ಮಂಜೂರು ಮಾಡಿಸಿದ್ದರು. ರೈತರಿಗೆ ಅನುಕೂಲಕ್ಕೆ ಗುಂಡಾಲ್ ಜಲಾಶಯ, ಉಡುತೊರೆ ಜಲಾಶಯ, ಕಿರೆಪಾತಿ, ಗೋಪಿನಾಥಂ, ಹೂಗ್ಯಂ ಜಲಾಶಯ ಸೇರಿದಂತೆ ಹತ್ತಾರು ಜಲಾಶಯಗಳನ್ನು ಅವರ ಕಾಲದಲ್ಲಿ ನಿರ್ಮಾಣ ಮಾಡಿಸಿದ್ದರು. ಅದರಂತೆ, ಈ ಕ್ಷೇತ್ರದಲ್ಲಿ ನಾನು ಸಹ 15 ವರ್ಷಗಳ ಕಾಲ ಶಾಸಕನಾಗಿ ತಂದೆಯ ಹಾದಿಯಲ್ಲಿಯೇ ಕೆಲಸ ಮಾಡಿದ್ದೇನೆ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಪತ್ನಿ ಆಶಾ, ಪುತ್ರ ನವನೀತ್ ಗೌಡ, ಪುತ್ರಿ ನಿಖಿತಾ ಗೌಡ, ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸೇರಿದಂತೆ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net