

ಬಾದಾಮಿ: ಬಸ್ ನಿಲ್ದಾಣದ ಹತ್ತಿರ ಇರುವ ಪೊಲೀಸ್ ಇಲಾಖೆಯ ವಸತಿ ಗೃಹಗಳಿಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸ್ ಇಲಾಖೆಯ ವಸತಿ ಗೃಹಗಳು ಶಿಥಿಲಾವಸ್ಥೆಯಲ್ಲಿ ಇರುವ ಹಾಗೂ ಮಳೆಗಾಲದಲ್ಲಿ ಸೋರುತ್ತಿರುವ ಕುರಿತು ಶಾಸಕ ಭೀಮಸೇನ ಚಿಮ್ಮನಕಟ್ಟಿ ವಿವರಿಸಿದರು. ಕೆಲವು ಕಟ್ಟಡಗಳು ಬಹಳ ವರ್ಷಗಳಾದ ಕಾರಣ 92 ವಸತಿಗೃಹಗಳ ಹೊಸ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗೃಹ ಸಚಿವ ಜಿ. ಪರಮೇಶ್ವರ ಅವರು ಭಾನುವಾರ ಸಂಜೆ ಶ್ರೀ ಬನಶಂಕರಿದೇವಿಯ ದರ್ಶನ ಪಡೆದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವುಕುಮಾರ ಹಿರೇಮಠ, ಡಾ. ಎಂ.ಎಚ್. ಚಲವಾದಿ, ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ, ಪುರಾತತ್ವ ಇಲಾಖೆಯ ರಮೇಶ ಮನಗೂಳಿ, ಯುವಮುಖಂಡ ಮಹಾಂತೇಶ ಹಟ್ಟಿ ಹಾಜರಿದ್ದರು. ಪಟ್ಟದಕಲ್ಲ ಗ್ರಾಮದ ಚಾಲುಕ್ಯರ ಗುಹಾಂತರ ದೇವಾಲಯಗಳನ್ನು ವೀಕ್ಷಣೆ ಮಾಡಿದರು. ನಂತರ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ ಚಾಲುಕ್ಯನಗರದ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.