ಚಿಕ್ಕಮಗಳೂರಲ್ಲಿ ಡಿ.22ರಂದು ಒಂದೇ ದಿನ ಗ್ರಾಪಂ ಚುನಾವಣೆ

Dr. Bagadi Gowtham
????????????????????????????????????
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆಗಳು ಡಿ.22 ರಂದು ಏಕಕಾಲಕ್ಕೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಗಾದಿ ಗೌತಮ್ ತಿಳಿಸಿದ್ದಾರೆ.

ಎರಡನೇ ಹಂತದ ಚುನಾವಣೆ ನಿಗದಿಗೊಂಡ ಡಿ.27 ರಂದು ದತ್ತಜಯಂತಿ ಕಾರ್ಯಕ್ರಮವಿರುವುದರಿಂದ ಪೊಲೀಸ್ ರಕ್ಷಣಾ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಡಳಿತ ರಾಜ್ಯ ಚುನಾವಣಾ ಆಯೋಗದ ಗಮನ ಸೆಳೆದು ಮನವಿ ಮಾಡಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಡಿ.22 ರಂದು ಒಂದೇ ಹಂತದಲ್ಲಿ ಜಿಲ್ಲೆಯ 8 ತಾಲೂಕುಗಳ 209 ಗ್ರಾಪಂಗಳಿಗೆ ಚುನಾವಣೆ ನಡೆಸುವಂತೆ ಆಯೋಗ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net