ಗ್ರಾ.ಪಂ.ಉಪ ಚುನಾವಣೆ : ನಿಷೇಧಾಜ್ಞೆ ಜಾರಿ

maharastra-gram-panchayat-1610945057
Published on



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸ್ಥಾನಗಳ ಉಪಚುನಾವಣೆ ಮೇ 25ರಂದು ನಡೆಯಲಿದ್ದು, ಬೆಳಗ್ಗೆ 6ರಿಂದ ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಉಪಚುನಾವಣೆ ನಡೆಯಲಿರುವ ಒಟ್ಟು 8 ಮತಗಟ್ಟೆ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಆನಂದ್ ಕೆ ಆದೇಶಿಸಿದ್ದಾರೆ.ಮೇ 25ರಂದು ಆ ಪ್ರದೇಶಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆ, ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
ಮೇ 24 ರಂದು ಮಸ್ಟರಿಂಗ್ ಮತ್ತು ಮೇ 25 ರಂದು ಡಿಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಮೇ 24ರಂದು ಬೆಳಗ್ಗೆ
6ರಿಂದ ಮೇ 25ರ ಸಾಯಂಕಾಲ ಡಿಮಸ್ಟರಿಂಗ್ ಕಾರ್ಯ ಮುಕ್ತಾಯವಾಗುವವರೆಗೆ ಉಳ್ಳಾಲ ತಾಲೂಕು ಕಚೇರಿ, ಬಂಟ್ವಾಳ ತಾಲೂಕು ಆಡಳಿತ ಸೌಧ, ಸುಳ್ಯ ತಾಲೂಕು ಆಡಳಿತ ಸೌಧ ಸಭಾಂಗಣ, ಬೆಳ್ತಂಗಡಿ ತಾಲೂಕು ಆಡಳಿತ ಸೌಧ ಸಭಾಂಗಣ ಕೇಂದ್ರಗಳ 200 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net