ಹಿರಿಯ ವಿಭಾಗಾಧಿಕಾರಿಯಾಗಿ ಜಿ.ಎನ್​. ಭಟ್​ ಅಧಿಕಾರ ಸ್ವೀಕಾರ

LIC Lead
Published on

ಎಲ್​ಐಸಿ ಉಡುಪಿ ವಿಭಾಗೀಯ ಕಚೇರಿ

ಉಡುಪಿ: ರಾಜ್ಯದ ಎಲ್​ಐಸಿ ವಿಭಾಗಗಳಲ್ಲಿ ಪ್ರತಿಷ್ಠಿತವಾಗಿರುವ ಉಡುಪಿ ವಿಭಾಗೀಯ ಕಚೇರಿಗೆ ಜಿ.ಎನ್​. ಭಟ್​ ಅವರನ್ನು ಹಿರಿಯ ವಿಭಾಗಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಶಿವಮೊಗ್ಗ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಅವರಿಗೆ ಮುಂಬಡ್ತಿ ನೀಡಲಾಗಿದೆ.

LIC 2
ಉಡುಪಿಯ ಎಲ್​ಐಸಿ ವಿಭಾಗಕ್ಕೆ ಉಡುಪಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಈ ಮೂರು ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ. 11 ಸಾವಿರಕ್ಕೂ ಅಧಿಕ ಪ್ರತಿನಿಧಿಗಳನ್ನು ಒಳಗೊಂಡ ಉಡುಪಿ ವಿಭಾಗೀಯ ಕಚೇರಿಯು ಕರ್ನಾಟಕದಲ್ಲೇ ಅತಿ ದೊಡ್ಡ ವಿಭಾಗವಾಗಿದೆ.

ಗ್ರಾಹಕರಿಗೆ ಸಂಸ್ಥೆಯು ಈಗಾಗಲೇ ಉತ್ತಮವಾದ ಸೇವೆ ನೀಡುತ್ತಲೇ ಇದೆ. ಉಡುಪಿ ವಿಭಾಗ ವ್ಯಾಪ್ತಿಯ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಎನ್​. ಭಟ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net