

ಹುಬ್ಬಳ್ಳಿ: ಆರ್ ಎಸ್ ಎಸ್ ನಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ಹಿಂದು ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ, ಹಿರಿಯ ವೈದ್ಯರಾದ ಡಾ. ಗೋವಿಂದ ಹ. ನರೇಗಲ್ಲ
ಅವರು ಮಂಗಳವಾರ ನಿಧನ ಹೊಂದಿದರು.
ಗೋ.ಹ. ನರೇಗಲ್ಲ ಎಂದೇ ಪ್ರಸಿದ್ಧರಾಗಿದ್ದ ಅವರು, ಹಿಂದು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರಿಗೆ, ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ.
ಸಂತಾಪ: ಗೋ.ಹ. ನರೇಗಲ್ಲ ಅವರ ನಿಧನಕ್ಕೆ ಆರ್.ಎಸ್.ಎಸ್. ಹಾಗೂ ಹಿಂದು ಸಂಘಟನೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ