

ಕುಂದಾಪುರ: ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗ ಅಧ್ಯಕ್ಷರಾಗಿ ಜಿ.ಗೋಪಾಲ ಪೂಜಾರಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಗೋಪಾಲ ಚಂದನ್, ಉಪಾಧ್ಯಕ್ಷರಾಗಿ ಸುಜಾತ ಕಾಂತು, ಬಾಬು ಖಾರ್ವಿ ಮತ್ತು ಮಮತಾ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಹಷೇರ್ಂದ್ರ ಆಚಾರ್ಯ, ಕಾರ್ಯದರ್ಶಿ ಕಾರ್ತಿಕ್ ಬಿ.ಖಾರ್ವಿ, ಜತೆ ಕಾರ್ಯದರ್ಶಿ ಮಹೇಶ್ ಶೇಟ್ ಮತ್ತು ರಾಘವೇಂದ್ರ ಬಿ., ಕೋಶಾಧಿಕಾರಿ ನರೇಂದ್ರ ಎಸ್.ಗಂಗೊಳ್ಳಿ, ಸಂಘಟನಾ ಕಾರ್ಯದರ್ಶಿ ಆನಂದ ಬಿಲ್ಲವ, ಕ್ರೀಡಾ ಕಾರ್ಯದರ್ಶಿ ಶರಣ್ ಪೂಜಾರಿ, ಜತೆ ಕ್ರೀಡಾ ಕಾರ್ಯದರ್ಶಿಗಳಾಗಿ ಗಣೇಶ್ ಪಡಿಯಾರ್ ಮತ್ತು ನಾಗಭೂಷಣ್ ಶೇಟ್, ಸಾಂಸ್ಕೃತಿಕ ಕಾರ್ಯದರ್ಶಿ ಮನೋಜ್ ಎನ್.ಡಿ., ಲೆಕ್ಕಪರಿಶೋಧಕರಾಗಿ ದೀಕ್ಷಿತ್ ಮೇಸ್ತ, ಸಲಹೆಗಾರರಾಗಿ ಡಾ.ವೀಣಾ ಕಾರಂತ್, ಸಮಿತಿ ಸದಸ್ಯರಾಗಿ ರಘುನಾಥ ಪೂಜಾರಿ, ಶೈಲಜಾ ಪೂಜಾರಿ, ವಿನೋದಾ ದೇವಾಡಿಗ, ನಿತ್ಯಾನಂದ ದೇವಾಡಿಗ, ಸಂದೇಶ್, ವೈಷ್ಣವಿ ಗೋಪಾಲ್, ವಿಜಯ ಖಾರ್ವಿ, ಈಶ್ವರ್ ಗಂಗೊಳ್ಳಿ ಮತ್ತು ಅಭಿಷೇಕ್ ಗಾಣಿಗ ಆಯ್ಕೆಯಾಗಿದ್ದಾರೆ.