ಜಿ.ಸಿ. ಜಗದೀಶ್ ದಸರಾ ದಶಮಂಟಪ ಸಮಿತಿ ಅಧ್ಯಕ್ಷ

G.C. Jagdish Dussehra Dashamantapa Committee President
Published on

ಮಡಿಕೇರಿ:

ಮಡಿಕೇರಿ ದಸರಾ ಜನೋತ್ಸವ ಸಂಬAಧಿ ಪೂರ್ವಭಾವಿ ಚಟುವಟಿಕೆಗಳು ಬಿರುಸಿನ ಮಳೆ ಮಧ್ಯೆಯೇ ಆರಂಭವಾಗಿದ್ದು, ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷರಾಗಿ ಜಿ.ಸಿ. ಜಗದೀಶ್ ಆಯ್ಕೆ ಆಗಿದ್ದಾರೆ. ಮಡಿಕೇರಿ ಕೋದಂಡರಾಮ ದೇವಾಲಯ ಸಭಾಂಗಣದಲ್ಲಿ ಬುಧವಾರ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಳೆದ ಸಾಲಿನ ಅಧ್ಯಕ್ಷ ಹೆಚ್. ಮಂಜುನಾಥ್ ಕೋಟೆ ಶ್ರೀ ಮಾರಿಯಮ್ಮ ದೇವಾಲಯದ ಜಿ.ಸಿ. ಜಗದೀಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ಮಾತನಾಡಿದ ಜಗದೀಶ್, ಈ ವರ್ಷ ದಶಮಂಟಪಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ದಸರಾ ಸಮಿತಿ ಕಾಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕೋಟೆ ಗಣಪತಿ ದೇವಾಲಯದ ಬಿ.ಎಂ.ರಾಜೇಶ್, ಕರವಲೆ ಭಗವತಿ ದೇವಾಲಯದ ಗಜೇಂದ್ರ, ಕೋಟೆ ಗಣಪತಿ ದೇವಾಲಯದ ವಿಕ್ಕಿ, ದಶಮಂಟಪ ಸಮಿತಿ ಗೌರವಾಧ್ಯಕ್ಷ ಮನು ಮಂಜುನಾಥ್, ಕೋದಂಡರಾಮ ದೇವಾಲಯ ಟ್ರಸ್ಟ್ ಅಧ್ಯಕ್ಷ ನಂಜುAಡ, ಕೋದಂಡರಾಮ ದೇವಾಲಯದ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಕುಶಾಲ್, ಮಾಜಿ ಅಧ್ಯಕ್ಷ ಗೋಪಿನಾಥ್, ದಶಮಂಟಪ ಸಮಿತಿ ಖಜಾಂಚಿ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net