ಹಂಪಿ: ಜಿ- ೨೦ ಸಭೆಗೆ ಸಿಸಿಟಿವಿ ಕಣ್ಗಾವಲು

ಹೊಸಪೇಟೆ ತಾಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.
Published on

ಹಂಪಿ- ಕಮಲಾಪುರ ಸೇರಿ ೧50 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಕೆ

ಹೊಸಪೇಟೆ:ವಿಶ್ವವಿಖ್ಯಾತ ಹಂಪಿಯಲ್ಲಿ ಆಯೋಜಿಸಿರುವ ಜಿ -೨೦ ಶೃಂಗಸಭೆಯಲ್ಲಿ ಜಗತ್ತಿನ ವಿವಿಧ ದೇಶಗಳ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹಂಪಿ ಹಾಗೂ ಕಮಲಾಪುರ ಭಾಗದಲ್ಲಿ ೧೫೦ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸುತ್ತಿದೆ.

ಜಿ-೨೦(ಗ್ರುಪ್ ಆಫ್ ಟ್ವೆಂಟಿ ಕಂಟ್ರೀಸ್) ಶೃಂಗಸಭೆ ಅಧ್ಯಕ್ಷತೆಯನ್ನು ಈ ಬಾರಿ ಭಾರತ ವಹಿಸಿಕೊಂಡಿದೆ. ೨೦ ಸದಸದ್ಯ ರಾಷ್ಟçಗಳು ಹಾಗೂ ಆಹ್ವಾನಿತ ಮತ್ತಿತರೆ ಸೇರಿದಂತೆ ೪೦ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಶೃಂಗಸಭೆಗೆ ಆಗಮಿಸುತ್ತಿದ್ದಾರೆ. ಆಯಾ ದೇಶಗಳ ಅಧ್ಯಕ್ಷರು, ಪ್ರಧಾನಿ, ಕೇಂದ್ರ ಸಚಿವರು ಹಾಗೂ ವಿದೇಶಾಂಗ ತಜ್ಞರು ಪಾಲ್ಗೊಳ್ಳುವರು. ಕೃಷಿ, ಕೈಗಾರಿಕೆ, ಆರ್ಥಿಕ, ವ್ಯಾಣಿಜ್ಯ, ಕಲೆ, ಸಂಸ್ಕೃತಿ ಮತ್ತು ಪಾರಂಪರಿಕ ತಾಣಗಳ ಪುನಶ್ಚೇತನಕ್ಕೆ ಸಂಬAಧಿಸಿ ಈ ಶೃಂಗದಲ್ಲಿ ಚರ್ಚೆ ಮತ್ತು ನಿರ್ಣಯಗಳನ್ನು ಕೈಗೊಳ್ಳುವುದರಿಂದರಿAದ ಜಾಗತಿಕ ಮಟ್ಟದಲ್ಲಿ ಜಿ- ೨೦ ಶೃಂಗಸಭೆ ಮಹತ್ವ ಎನಿಸಿದೆ.
ಅದರ ಭಾಗವಾಗಿ ಹಂಪಿಯಲ್ಲಿ ಜು.೯ ರಿಂದ ೧೨ರ ವರೆಗೆ ಜಿ-೨೦ ಕಲ್ಚರಲ್ ಗ್ರುಪ್ ಮೀಟಿಂಗ್ ಮತ್ತು ೧೩ ರಿಂದ ೧೬ ರ ವರೆಗೆ ಶೆರ್ಪಾ ಸಭೆಗಳನ್ನು ಆಯೋಜಿಸಲಾಗಿದ್ದು, ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹೆಜ್ಜೆ ಹೆಜ್ಜೆಗೂ ಸಿಟಿಟಿವಿ ಕಣ್ಗಾವಲು ಇರಲಿದೆ.

ಎಲ್ಲೆಲ್ಲಿ ಸಿಸಿಟಿವಿ ಅಳವಡಿಕೆ?

ವಿಶ್ವ ಪಾರಂಪರಿಕ ತಾಣ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗಾಗಿ ಈ ಹಿಂದೆಯೇ ಆಯಕಟ್ಟಿನ ಜಾಗಗಳಲ್ಲಿ ಹವಾಮಾ ಮತ್ತು ಆರ್ಕಲಾಜಿಕಲ್ ಸರ್ವೆ ಆಫ್ ಇಂಡಿಯಾ ವತಿಯಿಂದ ಹತ್ತಾರು ಸಿಸಿಟಿವಿಗಳನ್ನು ಅಳವಡಿಸಿತ್ತು. ಇದೀಗ ಪೊಲೀಸ್ ಇಲಾಖೆಯಿಂದ ಜಿ.೨೦ ನಿಮಿತ್ತ ೧೧೫ ಸಿಸಿಟಿವಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತಿದೆ. ಈ ಪೈಕಿ ಹಂಪಿಯ ಬಸ್ ನಿಲ್ದಾಣ, ವಾಹನಗಳ ನಿಲುಗಡೆ ಪ್ರದೇಶ, ಶ್ರೀ ಪಂಪಾವಿರೂಪಾಕ್ಷೇಶ್ವರ, ರಥ ಬೀದಿ, ಎದುರು ಬಸವಣ್ಣ, ಚಕ್ರತೀರ್ಥ, ಹಜಾರ ರಾಮ, ಕಡಲೆಕಾಳು ಗಣಪ, ಸಾಸ್ವಿಕಾಳು ಗಣಪ, ಕಮಲ ಮಂಟಪ, ಆನೆ ಸಾಲು, ಒಂಟೆ ಸಾಲು, ವಿಜಯ ವಿಠ್ಠಲ ದೇವಸ್ಥಾನ, ಕಮಲಾಪುರ ಅಂಬೇಡ್ಕರ್ ಸರ್ಕಲ್ ಸೇರಿದಂತೆ ಎಲ್ಲ ದೇವಸ್ಥಾನ, ಸ್ಮಾರಕಗಳು ಪ್ರಮುಖ ಸ್ಥಳಗಳು ಸೇರಿದಂತೆ ೧೫೦ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಜನರ ಚಲನವಲನದ ಮೇಲೆ ನಿಗಾ ಇರಿಸಲಿವೆ.

ಸುತ್ತಲಿನ ಅರಣ್ಯದಲ್ಲಿ ಕೂಂಬಿAಗ್:
ಜಿ-೨೦ ಗಣ್ಯರ ಭದ್ರತೆಯ ದೃಷ್ಟಿಯಿಂದ ಹಂಪಿ ಪ್ರವೇಶಿಸುವ ಮುಖ್ಯ ಮಾರ್ಗಗಳನ್ನು ಹೊರತು ಪಡಿಸಿ, ಜನರು ಸುತ್ತಮುತ್ತಲಿನ ಅರಣ್ಯ ಪ್ರದೇಶ, ನದಿ ದಾಟಿ ಬರುವುದನ್ನು ನಿರ್ಬಂಧಿಸಿದೆ. ಅದಕ್ಕಾಗಿ ಪೊಲೀಸ್ ಇಲಾಖೆಯ ವಿಶೇಷ ತಂಡ, ಐಜಿಎನ್‌ಎಫ್‌ಎ(ಇಂದಿರಾಗಾAಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿ) ಜಂಟಿಯಾಗಿ ದಿನದ ಶೃಂಗ ಮುಗಿಯುವವರೆಗೆ ೨೪*೭ ಕೂಂಬಿAಗ್ ನಡೆಸಲಿದೆ. ಹಂಪಿಗೆ ಸಂಪರ್ಕ ಕಲ್ಪಸುವ ಕಡ್ಡಿರಾಂಪುರ ಮತ್ತು ಕಮಲಾಪುರ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗದAತೆ ವಾಹನಗಳ ತಪಾಸಣೆಗೆ ಯೋಜನೆ ಸಿದ್ಧಗೊಳಿಸುತ್ತಿದೆ ಎನ್ನಲಾಗಿದೆ.

ಜಿ- ೨೦ ಗೆ ಆಗಮಿಸುವ ಗಣ್ಯರ ಸುರಕ್ಷತೆ ದೃಷ್ಟಿಯಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ಬುವನಹಳ್ಳಿ ಕ್ರಾಸ್‌ನಿಂದ ಹಂಪಿ, ಅನಂತಶಯನಗುಡಿಯಿAದ ಹಂಪಿ ವರೆಗೆ ಹಾಗೂ ಹಂಪಿಯ ಆಯ್ದ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ಒಟ್ಟು ೧೧೫ ಸಿಸಿಟಿವಿ ಅಳವಡಿಸಲಾಗುತ್ತಿದೆ. ಕಮಲಾಪುರ ಮತ್ತು ಹಂಪಿ ಪೊಲೀಸ್ ಠಾಣೆಯಲ್ಲಿ ಅದರ ಕಂಟ್ರೂಲ್ ರೂಂ ತೆರೆಯಲಾಗಿದ್ದು, ಎಲ್ಲ ಸಿಸಿಟಿವಿಗಳ ಮೇಲೆ ನಿರಂತರ ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಲಾಗುವುದು. ಅದರೊಂದಿಗೆ ಎಲ್ಲೆಡೆ ಹೆಚ್ಚಿನ ಪೊಲೀಸ್ ಪಹರೆ ಹಾಕಲು ಉದ್ದೇಶಿಸಿದೆ.

- ಶ್ರೀಹರಿಬಾಬು, ಎಸ್ಪಿ, ವಿಜಯನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net