

ಹುಬ್ಬಳ್ಳಿ: ಎಲ್ ಟಿಐ ಮೈಂಡ್ ಟ್ರೀ ಫೌಂಡೇಷನ್, ಫ್ಯುಯೆಲ್ (ಫ್ರೆಂಡ್ಸ್ ಯೂನಿಯನ್ ಫಾರ್ ಎನರ್ಜೈಜಿಂಗ್ ಲೈವ್ಸ್), ಐಡಿಆರ್ ಪಿ, ಧಾರವಾಡದ ಐಐಐಟಿ ಸಹಯೋಗದಲ್ಲಿ ಭವಿಷ್ಯದ ಕೌಶಲಗಳಿಗಾಗಿ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ.
ಕೌಶಲ ಕ್ಷೇತ್ರದ ಸಬಲೀಕರಣದ ಗುರಿಯೊಂದಿಗೆ ಇದನ್ನು ಘೋಷಣೆ ಮಾಡಲಾಗಿದೆ. ಈ ಪ್ರಮಾಣಪತ್ರ ಕಾರ್ಯಕ್ರಮವು ಡಿಜಿಟಲ್ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಸಾಧನಗಳನ್ನು ಒದಗಿಸುವ ಮೂಲಕ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ಕಡಿಮೆ ಮಾಡಲು ವಿನ್ಯಾಸಗೊಂಡಿದೆ.
ಫ್ಯುಯೆಲ್ ಬಿಜಿನೆಸ್ ಸ್ಕೂಲ್ ಮತ್ತು ಐಐಐಟಿ ಧಾರವಾಡದ ಅಧ್ಯಾಪಕರು ಈ ಕಾರ್ಯಕ್ರಮ ರೂಪಿಸಿದ್ದಾರೆ. ಎಲ್ ಟಿಐ ಮೈಂಡ್ ಟ್ರೀ ಫೌಂಡೇಷನ್ ಮತ್ತು ಐಐಐಟಿ ಧಾರವಾಡ ಜಂಟಿ ಪ್ರಮಾಣೀಕರಣವನ್ನು ಇದಕ್ಕೆ ಒದಗಿಸುತ್ತವೆ.
ಈ ಪ್ರಮಾಣಪತ್ರ ಕಾರ್ಯಕ್ರಮವು ಔಪಚಾರಿಕ ಶಿಕ್ಷಣದಿಂದ ಹೊರಗಿರುವ ವಿದ್ಯಾರ್ಥಿಗಳಿಗೆ ಸಮಗ್ರ ತರಬೇತಿ, ಇಂರ್ಟನ್ಶಿಪ್ ಅವಕಾಶಗಳು ಮತ್ತು ಸ್ಟೈಫಂಡ್ ಬೆಂಬಲದೊಂದಿಗೆ ಸಂಪೂರ್ಣ ಸಹಕಾರ ನೀಡುವ ಗುರಿ ಹೊಂದಿದೆ. ಐಐಐಟಿ ಧಾರವಾಡದ ಸಹಯೋಗದೊಂದಿಗೆ ವಿತರಿಸಲಾದ ಪಠ್ಯಕ್ರಮವು ಬೋಧಕ- ನೇತೃತ್ವದ ಮತ್ತು ಸ್ವಯಂ ಕಲಿಕೆ, ಕಾರ್ಯಾಗಾರಗಳು, ಪರಿಣಿತ ಮಾತುಕತೆಗಳು, ಪ್ರಾಜೆಕ್ಟ್ ವರ್ಕ್ ಮತ್ತು ಇಂರ್ಟನ್ಶಿಪ್ ಮತ್ತು ಪ್ರಾಯೋಗಿಕ ಉದ್ಯಮದ ಅನುಭವವನ್ನು ಒದಗಿಸುವ ಸಂಯೋಜಿತ ಮಾದರಿಯಾಗಿದೆ.
ಈ ಕಾರ್ಯಕ್ರಮದಿಂದ ಹಲವು ಅನುಕೂಲಗಳು ಯುವಕರಿಗೆ ಲಭ್ಯವಾಗಲಿವೆ. ಹಿಂದುಳಿದ ಯುವಕರಿಗೆ ಉತ್ತಮ ಗುಣಮಟ್ಟದ ತಂತ್ರಜ್ಞಾನದ ತರಬೇತಿಯನ್ನು ನೀಡುವ ಮೂಲಕ ಆರ್ಥಿಕ ಚಲನಶೀಲತೆಯನ್ನು ಹೆಚ್ಚಿಸಲು ಬದ್ಧವಾಗಿದೆ.
ವೈವಿಧ್ಯಮಯ ಪ್ರತಿಭೆಗಳನ್ನು ಪುರಸ್ಕರಿಸಲು ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ನಾಯಕತ್ವವನ್ನು ಬೆಂಬಲಿಸುವ ನಮ್ಮ ಸಮರ್ಪಣೆಗೆ ಈ ಕಾರ್ಯಕ್ರಮವು ಸಾಯಾಗಿದೆ ಎಂದು ಮುಖ್ಯ ಸುಸ್ಥಿರತೆಯ ಎಲ್ ಟಿಐ ಮೈಂಡ್ ಟ್ರೀ ಅಧಿಕಾರಿ ಪಣೀಶ್ ರಾವ್ ಹೇಳಿದ್ದಾರೆ.
ಈ ಪರಿವರ್ತಕ ಪ್ರಯಾಣದ ಭಾಗವಾಗಿರಲು ನಾವು ಹೆಮ್ಮೆಪಡುತ್ತೇವೆ ಎಂದು ಫ್ಯುಯೆಲ್ ಸಂಸ್ಥಾಪಕ ಅಧ್ಯಕ್ಷ ಕೇತನ್ ದೇಶಪಾಂಡೆ ಹಾಗೂ ಚೀಫ್ ಮೆಂಟರ್ ಸಂತೋಷ ಹುರಳಿಕೊಪ್ಪಿ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಮೃದು ಕೌಶಲಗಳ ಸರಿಯಾದ ಮಿಶ್ರಣವನ್ನು ಒದಗಿಸುವ
ಮೂಲಕ ಐಟಿ, ಎಐ ಮತ್ತು ಕೋರ್ ಜಾವಾ ಉದ್ಯಮಗಳಲ್ಲಿನ ಕೌಶಲ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಕಾರ್ಯಕ್ರಮದ ಪ್ರಭಾವ ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ಐಐಐಟಿ ನಿರ್ದೇಶಕ ಪ್ರೊ. ಮಹಾದೇವ ಪ್ರಸನ್ನ ತಿಳಿಸಿದ್ದಾರೆ.