ಕಲಿಕೆಯಿಂದ ಭವಿಷ್ಯ ಬಂಗಾರ

22KAGWAD2
Published on

ಕಾಗವಾಡ: ಶಿಕ್ಷಕ, ಪಾಲಕ, ವಿದ್ಯಾರ್ಥಿ ಮತ್ತು ಶಿಕ್ಷಣ ಸಂಸ್ಥೆ ಭವಿಷ್ಯದ ಭದ್ರ ಬುನಾದಿಗೆ ನಾಲ್ಕು ಆಧಾರ ಸ್ತಂಭಗಳಿದ್ದಂತೆ. ವಿದ್ಯಾರ್ಥಿ ಸಮೂಹವು ಸಮರ್ಪಣಾ ಭಾವದಿಂದ ವಿದ್ಯೆ ಕಲಿತು ಬದುಕು ರೂಪಿಸಿಕೊಳ್ಳಬೇಕೆಂದು ಬೆಳಗಾವಿ ಸಾಹಿತಿ ಡಾ.ಪಿ.ಜಿ.ಕೆಂಪನ್ನವರ ಹೇಳಿದರು.

ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

ಮಹಾವಿದ್ಯಾಲಯದ ಆಡಳಿತಾಧಿಕಾರಿ ವಿ.ಎಸ್.ತುಗಶೆಟ್ಟಿ ಮಾತನಾಡಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಎಂ.ಜಕ್ಕಣ್ಣವರ ಸಂಪಾದಿತ ರಾಣಿ ಚನ್ನಮ್ಮ ವಿವಿಯ ಬಿಎಸ್ಸಿ ಒಂದನೇ ಸೆಮಿಸ್ಟರ್ ಕನ್ನಡ ಭಾಷೆಯ ಸಾಹಿತ್ಯ ಸೊಬಗು-೧ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಎ.ಟಿ.ಪಾಟೀಲ ಸಂಪಾದಿತ ಬಿಎಸ್ಸಿ ಮೂರನೇ ಸೆಮಿಸ್ಟರ್ ಗದ್ಯ ಪ್ರಭಾ ಪಠ್ಯಪುಸ್ತಕ ಬಿಡುಗಡೆ ಮಾಡಲಾಯಿತು. ಹಿರಿಯ ಪತ್ರಕರ್ತ ಸುಕುಮಾರ ಬನ್ನೂರೆ ಸೇರಿ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಡಾ.ಎಸ್.ಪಿ.ತಳವಾರ, ಪ್ರೊ.ಬಿ.ಎ.ಪಾಟೀಲ, ಪ್ರೊ.ಬಿ.ಡಿ.ಧಾಮಣ್ಣವರ. ಡಾ.ಚಂದ್ರಶೇಖರ ವೈ., ಪ್ರೊ.ಎ.ಎ.ಪಾಟೀಲ, ಪ್ರೊ.ವಿ.ಬಿ.ಬುರ್ಲೆ, ಪ್ರ‍್ರೊ.ಎಸ್.ಡಿ.ಬಿರಾದಾರ, ಪ್ರ‍್ರೊ.ಎನ್.ಎಂ.ಬಾಗೇವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net