ಭವಿಷ್ಯದ ಪೀಳಿಗೆಗೆ ಪರಿಸರ ಸಂರಕ್ಷಿಸಿ

02 HRP 02
ಹರಪನಹಳ್ಳಿ ಉಚ್ಚಂಗೆಮ್ಮ ಗುಡ್ಡದ ಸಂರಕ್ಷಣಾ ಸ್ಥಳದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೋಟಿ ವೃಕ್ಷ ಸಪ್ತಾಹ ಕಾರ್ಯಕ್ರಮ ನಡೆಸಲಾಯಿತು. ಎಂ ಪಿ ವಾಗೀಶ, ಮುಖ್ಯ ಶಿಕ್ಷಕ ಅರ್ಜುನ ಪರಸಪ್ಪ, ಗಂಗಾಧರ ಸಿ, ಹೊನ್ನತ್ತೆಪ್ಪ, ಕೆ ಷಣ್ಮುಖಪ್ಪ ಇತರರಿದ್ದರು.
Published on

ಹರಪನಹಳ್ಳಿ: ಕೋಟಿ ಕೋಟಿ ಜೀವರಾಶಿಗಳು ಪರಿಸರವನ್ನು ಅವಲಂಬಿಸಿವೆ ಎಂದು ಬಿಇಒ ಲೇಪಾಕ್ಷಪ್ಪ ಹೇಳಿದರು.

ಪಟ್ಟಣದ ಹಡಗಲಿ ರಸ್ತೆಯ ಉಚ್ಚಂಗೆಮ್ಮ ಗುಡ್ಡದ ಸಂರಕ್ಷಣಾ ಸ್ಥಳದಲ್ಲಿ ಮಂಗಳವಾರ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೋಟಿ ವೃಕ್ಷ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭವಿಷ್ಯದ ಪೀಳಿಗೆಗೆ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಜಾಗತೀಕವಾಗಿ ವೇಗವಾಗಿ ಬೆಳೆಯುತ್ತಿರುವ ಮುಂದುವರಿದ ರಾಷ್ಟ್ರಗಳು ದೈತ್ಯ ಕೈಗಾರಿಕೆಗಳ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ವಾಹನ ದಟ್ಟನೆ ಹೆಚ್ಚುತ್ತಿದ್ದು, ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ನಿಂದ ಮನುಷ್ಯನ ದೇಹವನ್ನು ಮತ್ತು ಪರಿಸರವನ್ನು ವಿನಾಶದ ಅಂಚಿಗೆ ನೂಕುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ವಲಯ ಅರಣ್ಯಾಧಿಕಾರಿ ರಾಜು ಮಾತನಾಡಿ, ಪರಿಸರ ಸಂರಕ್ಷಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಮಿತಿಮೀರಿ ಬೆಳೆಯುತ್ತಿರುವ ನಗರಗಳಿಂದ ಪರಿಸರವು ಹಾಳಾಗುತ್ತಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net