ಸೋಫಾ ಸೆಟ್‌ ಖರೀದಿಗೆ ಉತ್ಸುಕತೆ: ಫರ್ನೀಚರ್ ಎಕ್ಸ್‌ಪೋಗೆ ಜನರಿಂದ ಉತ್ತಮ ಸ್ಪಂದನೆ, 11ರವರೆಗೆ ಆಯೋಜನೆ

Furniture Expo 11
Published on

ಪೀಣ್ಯ ದಾಸರಹಳ್ಳಿ: ಮನೆ, ಕಚೇರಿಗಳಲ್ಲಿ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು ಸೂಕ್ತವಾದ ವಿವಿಧ ಬಗೆಯ ಸೋಫಾ ಸೆಟ್, ಟೀಪಾಯ್ , ಟೀಕ್ ವುಡ್ ನಿಂದ ತಯಾರಿಸಿರುವ ಮಹಾರಾಜ ಮಾದರಿಯ ಆಸನಗಳು, ಕೇರಳ ಪೋಷ್ ವಿನ್ಯಾಸದ ಕುರ್ಚಿ, ಮಂಚ, ತೂಗೂಯ್ಯಾಲೆ ಸಹಿತ ಹಲವು ಫರ್ನೀಚರ್‌ಗಳನ್ನು ಖರೀದಿಸಲು ಗ್ರಾಹಕರು ಭಾನುವಾರ ಭಾರಿ ಉತ್ಸುಕತೆ ತೋರಿದರು.

ಜಾಲಹಳ್ಳಿಯ ಎಚ್‌ಎಂಟಿ ಮೈದಾನದಲ್ಲಿ ಎಕ್ಸ್ ಪೋ ಇಂಡಿಯಾ ಇವೆಂಟ್ಸ್ ಆ್ಯಂಡ್ ಎಕ್ಸಿಬಿಷನ್ಸ್ ಹಾಗೂ ವಿಜಯವಾಣಿ ಸಹಯೋಗದಲ್ಲಿ ನಡೆಯುತ್ತಿರುವ ಫರ್ನೀಚರ್ ಮೇಳದಲ್ಲಿ ರಜಾದಿನದಂದು ದೊಡ್ಡ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ, ಶಾಪಿಂಗ್ ಮಾಡಿದರು. ಹಲವು ಫರ್ನೀಚರ್​ ಮೇಲೆ ಶೇ.70ರವರೆಗೆ ರಿಯಾಯಿತಿ ಇದ್ದ ಕಾರಣ ಖರೀದಿ ಭರಾಟೆ ಜೋರಾಗಿತ್ತು.

ಮೇಳದಲ್ಲಿ ವಿವಿಧ ಶ್ರೇಣಿಯ ಫರ್ನೀಚರ್ ಸೇರಿ ಗೃಹೋಪಯೋಗಿ ವಸ್ತುಗಳು ಗಮನ ಸೆಳೆಯುವಂತಿವೆ. ವಿಶಾಲವಾದ ಮಳಿಗೆಗಳಲ್ಲಿ ಸಾಮಗ್ರಿಗಳನ್ನು ಒಪ್ಪ ಓರಣವಾಗಿ ಪ್ರದರ್ಶಿಸಿದ್ದು, ವೀಕ್ಷಿಸಿ ಖರೀದಿಸಲು ಅನುಕೂಲ ಮಾಡಿಕೊಟ್ಟಿದೆ. ಬೆಲೆಯೂ ಕಡಿಮೆ ಇದ್ದು, ಗುಣಮಟ್ಟಕ್ಕೆ ತಕ್ಕಂತೆ ವಸ್ತುಗಳಿವೆ.

| ರಾಜು ಜಾಲಹಳ್ಳಿ

ಯುವ ನಟಿ ಲೇಖಾ ಚಂದ್ರ ಭೇಟಿ 

ಫರ್ನೀಚ‌ರ್​ ಮೇಳಕ್ಕೆ ಭಾನುವಾರ ಯುವ ನಟಿ ಲೇಖಾ ಚಂದ್ರ ಭೇಟಿ ನೀಡಿ, ಅಲ್ಲಿದ್ದ ಉತ್ಪನ್ನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸೋಫಾ ಸೆಟ್, ಜೂಲಾ, ಸೇಫ್ ಲಾಕರ್ ಇತ್ಯಾದಿ ಸಾಮಗ್ರಿಗಳ ಬಗ್ಗೆ ತಯಾರಕರಿಂದ ಮಾಹಿತಿ ಪಡೆದು ಖುಷಿಪಟ್ಟರು. ಮೇಳದಲ್ಲಿ ಉತ್ತಮವಾದ ವಸ್ತುಗಳನ್ನು ಪ್ರದರ್ಶಿಸಿದ್ದು, ರಿಯಾಯಿತಿ ಇರುವ ಕಾರಣ ಸಾರ್ವಜನಿಕರು ಕೈಗೆಟುವ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಸಲಹೆ ನೀಡಿದರು.

Furniture 2

ಗಮನ ಸೆಳೆವ ಗೃಹಾಲಂಕಾರ ವಸ್ತುಗಳು 

ಮೇಳದಲ್ಲಿ ಫರ್ನೀಚರ್ ಅಲ್ಲದೆ ಗೃಹಾಲಂಕಾರದಲ್ಲಿ ಬಳಸುವ ನೆಲಹಾಸು, ಕಿಟಿಕಿಗಳ ಕರ್ಟನ್ಸ್, ಕುಶನ್, ಹ್ಯಾಂಗಿಂಗ್ ಪಾಟ್ಸ್, ದೀಪದ ಗುಚ್ಛ, ಪಿಂಗಾಣಿ ವಸ್ತುಗಳನ್ನು ಪದರ್ಶಿಸಲಾಗಿದೆ. ಜತೆಗೆ ಡೆಸ್ ಮೆಟೀರಿಯಲ್ಸ್, ಖಾದಿ ಬಟ್ಟೆಗಳು, ಕೈಮಗ್ಗ ಬಟ್ಟೆಗಳು, 5ಡಿ ಇಮೇಜಿಂಗ್ ಚಿತ್ರಗಳು, ಸೇಫ್ ಲಾಕರ್, ಕರಕುಶಲ ವಸ್ತುಗಳು ಗಮನ ಸೆಳೆಯುವಂತಿವೆ. ಫರ್ನೀಚರ್ ಮೇಳ 11ರವರೆಗೂ ನಡೆಯಲಿದೆ. ಪ್ರತಿದಿನ ಬೆಳಗೆ 10.30ರಿಂದ ರಾತ್ರಿ 9ರವರೆಗೂ ತೆರೆದಿರುತ್ತದೆ. ಮೇಳಕ್ಕೆ ಉಚಿತ ಪವೇಶವಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಇತ್ತೀಚಿಗಷ್ಟೇ ಹಾಸನದಲ್ಲಿ ಹೊಸ ಮನೆ ಕಟ್ಟಿಸಿದ್ದು. ಅಲ್ಲಿಗೆ ಉತ್ತಮ ಸೋಫಾ ಸೆಟ್ ಖರೀದಿಸಬೇಕಿದೆ. ಟೀಕ್​ವುಡ್‌ನಿಂದ ತಯಾರಿಸಿವ ಸೋಫಾ ಇಷ್ಟವಾಗಿದ್ದು, ಶೀಘ್ರದಲ್ಲೇ ಕೊಳ್ಳುವೆ. ನನಗೆ ಸಾಂಪ್ರದಾಯಿಕ ಉತ್ಪನ್ನಗಳು ಹೆಚ್ಚು ಇಷ್ಟ. ಗೃಹಾಲಂಕಾರ ಸಾಮಗ್ರಿಗಳ ಖರೀದಿ ಶಾಪಿಂಗ್ ಕೂಡ ಮುದ ನೀಡುತ್ತದೆ.

| ಲೇಖಾ ಚಂದ್ರ ಯುವ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net