ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ಗೆ ಪಿಠೋಪಕರಣ ಭಸ್ಮ

13-KGL-3,,
ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಶೈಕ್ಷಣಿಕ ಪಿಠೋಪಕರಣ ಸುಟ್ಟು ಹೋಗಿರುವುದು.
Published on

ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳ ಶಾಸ್ರ್ತ ಕೊಠಡಿಯಲ್ಲಿ ಮಂಗಳವಾರ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಸಂಭವಿಸಿ ವಿವಿಧ ಕೊಠಡಿಯಲ್ಲಿದ್ದ ಶೈಕ್ಷಣಿಕ ಪಿಠೋಪಕರಣ ಸುಟ್ಟುಹೋಗಿವೆ.

ಕಾಲೇಜು ಮೈದಾನಕ್ಕೆ ವಾಯುವಿಹಾರಕ್ಕೆ ಆಗಮಿಸಿದ್ದ ಜನರು ಕೊಠಡಿಯಲ್ಲಿ ಹೊಗೆ ಬರುವುದನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕಾಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಈ ಅವಘಡದಲ್ಲಿದ್ದ ಕೊಠಡಿಯಲ್ಲಿದ್ದ 7 ಗಣಕಯಂತ್ರ, 2 ಪ್ರಿಂಟರ್ ಸೇರಿದಂತೆ ಸುಮಾರು 25 ಪೀಠೋಪಕರಣ ಸುಟ್ಟು ಭಸ್ಮವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net