ಅಂತ್ಯಸಂಸ್ಕಾರದ ಬಳಿಕ ಶವ ಕೊಂಡೊಯ್ಯುವಂತೆ ದುಂಬಾಲು ಬಿದ್ದ ಆಸ್ಪತ್ರೆ!

deadbody
Published on

ಮಂಗಳೂರು: ಮೃತನ ಅಂತ್ಯಸಂಸ್ಕಾರ ನೆರವೇರಿಸಿದ ಬೆನ್ನಲ್ಲೇ ಆತನ ಮೃತದೇಹ ವೆನ್ ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗಿದೆ!

ಜಾಂಡೀಸ್ ಖಾಯಿಲೆಯಿಂದ ಆ.19ರಂದು ಇಲ್ಲಿನ ವೆನ್​ಲಾಕ್ ಆಸ್ಪತ್ರೆಯಲ್ಲಿ ಉಳಾಯಿಬೆಟ್ಟು ನಿವಾಸಿ ವಿನೋದ್ ಮೃತಪಟ್ಟಿದ್ದರು. ವಿನೋದ್ ಅನಾಥರಾಗಿರುವ ಕಾರಣ ಆ ದಿನವೇ ಸ್ಥಳೀಯರು ಆತನ ಅಂತ್ಯಕ್ರಿಯೆ ನೆರವೇರಿಸಿದ್ದರು. ಸತ್ತ ವ್ಯಕ್ತಿ ಸುಟ್ಟು ಬೂದಿಯಾದ ಮರುದಿನವೇ ಆಸ್ಪತ್ರೆ ಸಿಬ್ಬಂದಿ ಮತ್ತೆ ಫೋನ್ ಕಾಲ್​ ಮಾಡಿ, 'ನಿಮ್ಮವರ ಮೃತದೇಹ ತೆಗೆದುಕೊಂಡು ಹೋಗಿ' ಎಂದರೆ ಹೇಗಾಗಬೇಡ ಇದನ್ನೂ ಓದಿರಿ ಗಂಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಬಂದ ಪತ್ನಿ, ಕಾರಣ ಹೀಗಿದೆ

ವಿನೋದ್​ ಅಂತ್ಯಕ್ರಿಯೆ ಮುಗಿದ ಬಳಿಕ ಅಂದರೆ ಆ.20 ಮತ್ತು 21 ಎರಡೂ ದಿನ ವಿನೋದ್​ನ ಪರಿಚಯಸ್ಥರಿಗೆ ಪದೇಪದೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ, 4 ಸಾವಿರ ಕಟ್ಟಿ ಹಣ ಕಟ್ಟಿ ವಿನೋದ್ ಶವ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಅಂತ್ಯಸಂಸ್ಕಾರ ನಡೆದರೂ ಮತ್ತೆ ಅದೇ ಹೆಸರಿನಲ್ಲಿ ಮತ್ತೊಂದು ಶವ ತೆಗೆದುಕೊಂಡು ಹೋಗಲು ದುಂಬಾಲು ಬಿದ್ದ ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net