

ಅಳವಂಡಿ: ಸಮೀಪದ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿ ದೇವಿ ಜಾತ್ರೋತ್ಸವ ಫೆ.10ರಿಂದ ಪ್ರಾರಂಭವಾಗಿದ್ದು 14ವರೆಗೆ ನಡೆಯಲಿದೆ.
ಇದನ್ನೂ ಓದಿ:ಮೊಗ್ರ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ
ಸೋಮವಾರ ದೇವಿಗೆ ಕಂಕಣಧಾರಣೆ, ಮಂಗಳವಾರ ಬೆಳಗ್ಗೆ ಫಲಪೂಜಾ ಕಾರ್ಯಕ್ರಮ, ಸಂಜೆ ಲಘು ರಥೋತ್ಸವ ಜರುಗಿತು.
ಬುಧವಾರ ಬೆಳಗ್ಗೆ ಶ್ರೀ ದೇವಿಗೆ ಪುಷ್ಪಾಲಂಕಾರ, ವಿಶೇಷ ಪೂಜೆ, ಹೋಮ, ಹವನ, ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ. ನಂತರ ಅನ್ನ ಸಂತರ್ಪಣೆ, ಕ್ರೀಡಾ ಉತ್ಸವ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ 1 ಸಾವಿರ ರೂ. ವೀರೇಶ ಎಲ್.ಕೊಡಾಲ, ದ್ವಿತೀಯ 500 ರೂ. ವೀರೇಶ ಕೊಳ್ಳಿ ಅವರು ನೀಡಲಿದ್ದಾರೆ. ಸಂಜೆ ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯರಿಂದ ಧ್ವಜಾರೋಹಣ ಹಾಗೂ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ ಶ್ರೀ ಕರಿಯಮ್ಮದೇವಿ ಬಯಲಾಟ ಸಂಘದಿಂದ ಶ್ರೀದೇವಿ ಮಹಾತ್ಮೆ ಅರ್ಥಾತ್ ನಿಶುಂಭರ ವಧೆ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.13ರ ಬೆಳಗ್ಗೆ ಮಂಜುನಾಥ ಬನ್ನಿಗೋಳ ದಂಪತಿಯಿಂದ ಶ್ರೀದೇವಿಗೆ ಶಾಕಾಂಬರಿ ಪೂಜೆ (ತರಕಾರಿ), ಸಂಜೆ 6ಕ್ಕೆ ಶ್ರೀದೇವಿ ಕಡುಬಿನ ಕಾಳಗ (ಛಟ್ಟು), 7ಕ್ಕೆ ಮಕ್ಕಳ ಕಲಾಕುಂಚ ರಸಮಂಜರಿ ಕಾರ್ಯಕ್ರಮ, ಪ್ರಥಮ ಬಹುಮಾನ 2 ಸಾವಿರ ರೂ. ಸೋಮಶೇಖರಯ್ಯ ಇನಾಮದಾರ, ದ್ವಿತೀಯ 1500 ರೂ. ದೇವೆಂದ್ರಪ್ಪ ಬಗನಾಳ, ತೃತೀಯ 1000 ರೂ. ಹೊನ್ನಪ್ಪ ಮೆತಗಲ್ ಅವರು ನೀಡಲಿದ್ದಾರೆ. ಫೆ.14ರಂದು ಶ್ರೀದೇವಿಯ ಓಕುಳಿ ಹಾಗೂ ಅಭಿಷೇಕ ಕಾರ್ಯಕ್ರಮ ನಡೆಯಲಿದೆ.
ರಾಮಚಂದ್ರಪ್ಪ ಪೂರ್ಮಾ ಹಾಗೂ ಗಿರಿಮಲ್ಲಯ್ಯ ದಂಪತಿಯಿಂದ ಕೆಲ ಪೂಜಾ ವಿಧಿಗಳು ನೆರವೇರಿದವು. ಪ್ರಮುಖರಾದ ಹೊನ್ನಪ್ಪ ಮೆತಗಲ್, ಈಶಪ್ಪ ಹಲಗೇರಿ, ಮಂಜುನಾಥ ಹಳ್ಳಿಕೇರಿ, ಶಂಕ್ರಪ್ಪ ಚಳಗೇರಿ, ಪ್ರದಾನೆಪ್ಪ ಹಂಡಿ, ದೇವೇಂದ್ರಪ್ಪ ಬಗನಾಳ, ರಾಮಚಂದ್ರ ಪೂರ್ಮಾ, ಮುದಕಪ್ಪ ಶಿಂಪಿಗೇರ, ಈಶಪ್ಪ ಹಲಗೇರಿ, ನಿಂಗಜ್ಜ ಹಳ್ಳಿಕೇರಿ, ಮಲ್ಲಪ್ಪ ಆರೇರ, ವಿರೂಪಾಕ್ಷಪ್ಪ ಬಳಿಗೇರ, ನಾಗಪ್ಪ ಕೂಲಿ, ಸೋಮಶೇಖರಯ್ಯ ಇನಾಮದಾರ, ಪಕೀರಗೌಡ ಪೊಲೀಸ್‌ಪಾಟೀಲ್, ಕೊಟ್ರಯ್ಯ ವಸ್ತ್ರದ, ಶ್ರೀಶೈಲಪ್ಪ ಹಳ್ಳಿಕೇರಿ, ಪಕ್ಕೀರಸಾಬ ಹಳ್ಳಿಕೇರಿ, ಶರಣಪ್ಪ ಸಜ್ಜನ ಇತರರು ಇರಲಿದ್ದಾರೆ.