ಇಬ್ರಾಹಿಂಪುರ ರೈಲ್ವೆ ನಿಲ್ದಾಣದ ಕಟ್ಟಡ ನಿರ್ಮಿಸಲು ಅನುದಾನ ಮಂಜೂರು

Funds sanctioned for construction of Ibrahimpur railway station building
Published on

ವಿಜಯಪುರ: ನಗರದಲ್ಲಿರುವ ಇಬ್ರಾಹಿಂಪುರ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು 1.50 ಕೋಟಿ ರೂಗಳ ಅನುದಾನ ಮಂಜೂರಾಗಿದ್ದು, ಶ್ರೀ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದೆಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.ನಗರದ ಇಬ್ರಾಹಿಂಪುರ ಭಾಗದ ಜನತೆಯ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣ ಇರಬೇಕೆನ್ನುವ ಕಾರಣಕ್ಕೆ ಆಗ ನಿಲ್ದಾಣ ಆರಂಭಿಸಲು ವಿಶೇಷ ಪ್ರಯತ್ನ ವಹಿಸಿ ಯಶಸ್ವಿಯಾಗಿದ್ದೆ.

ಈ ಇಬ್ರಾಹಿಂಪುರ ರೈಲ್ವೆ ನಿಲ್ದಾಣ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ವಿಶ್ರಾಂತ ಅಭಿಯಂತರ ಶಂಕರಗೌಡ ಪಾಟೀಲ ಸವನಹಳ್ಳಿ ವಿಶೇಷ ಪ್ರಯತ್ನಿಸಿದ್ದರು. ಈಗಲೂ ಇಲ್ಲಿ ಕಟ್ಟಡ ಅಭಿವೃದ್ಧಿ ಸೇರಿ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಬಾರಿ ಮನವಿಯನ್ನು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಜನತೆಯ ಅನುಕೂಲಕ್ಕಾಗಿ ಈ ಕಾರ್ಯ ಕೈಗೊಂಡಿರುವೆ ಎಂದು ಮಾಹಿತಿ ನೀಡಿದ್ದಾರೆ.

ಇಬ್ರಾಹಿಂಪುರ ಭಾಗದ ಪ್ರಯಾಣಿಕರು ಈ ಇಬ್ರಾಹಿಂಪುರ ರೈಲ್ವೆ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಹೋಗಲು ಆಗುತ್ತಿದ್ದ ಸಮಯವೂ ಉಳಿತಾಯವಾಗಲಿದೆ. ಸದ್ಯ ಕಟ್ಟಡ ನಿರ್ಮಾಣಕ್ಕೂ ಪೂರಕ ಅನುದಾನ ಮಂಜೂರಾಗಿದ್ದು, ಶ್ರೀ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net