

ಚಿಕ್ಕಮಗಳೂರು: ಆಲ್ದೂರಿನ ಮರದ ವ್ಯಾಪಾರಿಯಾದ ರವಿ ೨೦೧೮ರಲ್ಲಿ ವಿವಾಹವಾಗಿದ್ದು, ೨೦೧೯ರಲ್ಲಿ ಅವರ ಮೇಲೆ ಮರ ಬಿದ್ದ ಪರಿಣಾಮದಿಂದ ಬೆನ್ನು ಮೂಳೆ ಮುರಿತಗೊಂಡಿತ್ತು. ೮ ವರ್ಷಗಳಿಂದ ವೀಲ್ ಚೇರಿನಲ್ಲಿಯೇ ಜೀವನ ನಡೆಸುತ್ತಿದ್ದ ಇವರಿಗೆ ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದೆ ಸಂಕಷ್ಟದಲ್ಲಿದ್ದರು.
ವಯಸ್ಸಾದ ತಾಯಿ ಹಾಗೂ ಪತ್ನಿಯ ಆರೈಕೆಯಲ್ಲೇ ಬದುಕುತ್ತಿರುವ ಇವರಿಗೆ ಹಣದ ಅವಶ್ಯಕತೆ ಅಗತ್ಯತೆ ಇರುವುದನ್ನು ಅರಿತ ಶ್ರೀದೇವಿರಮ್ಮ ಸ್ಪಂದನ ಬಳಗ ೧೫ ಸಾವಿರ ರೂಪಾಯಿ ನೀಡಿ ಸಹಕರಿಸಿದೆ. ಈ ಸಂದರ್ಭದಲ್ಲಿ ದೇವಿರಮ್ಮ ಸ್ಪಂದನ ಬಳಗದ ರೀನಾ ಸುಜೇಂದ್ರ, ಪ್ರನುಪ ನಾಗರಾಜ್, ಶಶಿಕಲಾಸ್ವಾಮಿ, ರತಿ ಪ್ರವೀಣ್ ಉಪಸ್ಥಿತರಿದ್ದರು.