ಕನ್ನಡ ಭವನಕ್ಕೆ ಅನುದಾನ ಕೋರಿ ಸಚಿವರಿಗೆ ಮನವಿ

CTD KANNDA BAVANA---
Published on

ಚಿತ್ರದುರ್ಗ: ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ 2ಕೋಟಿ ರೂ.ಅನುದಾನ ಮಂಜೂರು ಮಾಡುವಂತೆ ಕೋರಿ ಮಂಗಳವಾರ ಕಸಾಪ ಜಿಲ್ಲಾ ಪದಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರು ಮಾತನಾಡಿ,2009ರಲ್ಲಿ ಚಿತ್ರದುರ್ಗದಲ್ಲಿ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ಚಿತ್ರದುರ್ಗ ದಲ್ಲಿ ಜರುಗಿತ್ತು. ಸಮ್ಮೇಳನದಲ್ಲಿ ಉಳಿದ ಹಣದಿಂದ ನಿವೇಶನ ಖರೀದಿಸಲಾಗಿದೆ. ರಾಜ್ಯದಲ್ಲಿ ಬಳ್ಳಾರಿ,ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕನ್ನಡ ಭವನಗಳಿವೆ. ಆದರೆ ಚಿತ್ರದುರ್ಗದಲ್ಲಿ ಕನ್ನಡ ಭವನವಿಲ್ಲ. ಇದು ಜಿಲ್ಲೆಯ ಸಾಹಿತ್ಯ ಪರಿಷತ್ ಆಜೀವ ಸದಸ್ಯರ ಕನಸಾಗಿದೆ.

ಭವನ ನಿರ್ಮಾಣ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಗಮನಕ್ಕೂ ತರಲಾಗಿದೆ. ಅಗತ್ಯವಿರುವ ಕನಿಷ್ಠ 2 ಕೋಟಿ ಅನುದಾನವನ್ನು ಇಲಾಖೆಯಿಂದ ಮಂಜೂರು ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಸಾಹಿತ್ಯ ಪರಿಷತ್ ಸಾಮಾನ್ಯವಾಗಿ 25 ಕೋಟಿ ರೂ.ಅನುದಾನ ನೀಡಲಾಗುತ್ತದೆ. ಈ ಬಾರಿ 5 ಕೋಟಿ ರೂ.ನೀಡಲಾಗಿ ದೆ. ಅಲ್ಲಿಯ ಅನುದಾನ ಬಳಸಿ ಕನ್ನಡ ಭವನ ನಿರ್ಮಿಸುವಂತೆ ಸೂಚಿಸಿದರು. ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಕಸಾಪ ಜಿಲ್ಲಾ ಕಾರ‌್ಯದರ್ಶಿ ಮಳಲಿ ಶ್ರೀನಿವಾಸ್,ಖಜಾಂಚಿ ಸಿ.ಲೋಕೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net