ಕ್ಯಾಂಪ್ಕೋ ವತಿಯಿಂದ ಧನಸಹಾಯ ವಿತರಣೆ

Bdk_Camco
Published on

ಬದಿಯಡ್ಕ: ಕ್ಯಾಂಪ್ಕೋದ ಸಕ್ರಿಯ ಸದಸ್ಯರಿಗೆ ಸಹಾಯ ಹಸ್ತ(ಸಾಂತ್ವಾನ) ಯೋಜನೆಯಂತೆ ಕ್ಯಾಂಪ್ಕೋ ಬಾಯಾರಿನ ಸಕ್ರಿಯ ಸದಸ್ಯ ಬಾಬು ಮೂಲ್ಯ ವಾದ್ಯಪಡ್ಪು ಅವರ ಕೃಷಿ ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ಹೆಜ್ಜೇನು ದಾಳಿಯ ಆಘಾತದಿಂದ ಮೃತರಾದ ದಿ.ಚಂದ್ರಹಾಸ ಕಿದೂರು ಅವರ ಪತ್ನಿ ಶಶಿಕಲಾ ಅವರಿಗೆ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ 50,000 ರೂ. ಸಹಾಯಧನ ಚೆಕ್ ಅನ್ನು ಗುರುವಾರ ವಿತರಿಸಿದರು.

ಕ್ಯಾಂಪ್ಕೋ ನಿರ್ದೇಶಕರಾದ ಬಾಲಕೃಷ್ಣ ರೈ ಬಾನೊಟ್ಟು, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕ ಚಂದ್ರ ಎಂ., ಬಾಯಾರು ಶಾಖಾ ಪ್ರಬಂಧಕ ರಮೇಶ್ ವೈ., ಸಕ್ರಿಯ ಸದಸ್ಯರಾದ ಬಾಬು ಮೂಲ್ಯ ವಾದ್ಯಪಡ್ಪು, ವಿಶ್ವನಾಥ ಮೂಲ್ಯ ಮಾಣಿಪ್ಪಾಡಿ, ಮಾಧವ ಕಿದೂರು ಉಪಸ್ಥಿತರಿದ್ದರು. ಬಡ ಕುಟುಂಬಕ್ಕೆ ಈ ಮೊತ್ತದ ಸಹಾಯ ನೀಡಿದ ಕ್ಯಾಂಪ್ಕೋ ಆಡಳಿತ ಸಮಿತಿಗೆ, ಮುತುವರ್ಜಿ ವಹಿಸಿದ ನಿರ್ದೇಶಕರಿಗೆ ಬಾಬು ಮೂಲ್ಯ ಕೃತಜ್ಞತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net