

ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಜಲ ಜೀವನ್ ಮಿಷನ್’ ಯೋಜನೆಗೆ ರಾಜ್ಯ ಸಚಿವ ಸಂಪುಟ ಬುಧವಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನವು ಮೈಲಿಗಲ್ಲಾಗಿದೆ. ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಯೋಜನೆ ರೂಪಿಸಲಾಗಿದ್ದು, ಎರಡು ಹಂತದ ಯೋಜನೆ ಪ್ರಗತಿಯಲ್ಲಿದೆ. ಮೂರನೇ ಹಂತದಲ್ಲಿ 1527 ಗ್ರಾಮ ವ್ಯಾಪ್ತಿಯ 3012 ವಸತಿ ಪ್ರದೇಶಕ್ಕೆ 991ಕೋಟಿ ರೂ.ಗೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.
ಮೊದಲ ಹಂತದಲ್ಲಿ 84 ವಸತಿ ಪ್ರದೇಶದಲ್ಲಿ 19ಕೋಟಿ ರೂ. ವೆಚ್ಚದ ಯೋಜನೆ ಪ್ರಗತಿಯಲ್ಲಿದ್ದು, 8 ಗ್ರಾಮಗಳಲ್ಲಿ ಕೆಲಸ ಮುಗಿದಿದೆ, 2ನೇ ಹಂತದಲ್ಲಿ 82 ಗ್ರಾಮಗಳಲ್ಲಿ ಯೋಜನೆ ಟೆಂಡರ್ ಹಂತದಲ್ಲಿದೆ. ನೀರಿನ ಮೂಲಾಧಾರದ ಮೇಲೆ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸಲು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದಲ್ಲಿ ಗ್ರಾಮಗಳ ಪ್ರತಿ ಮನೆಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಈ ಯೋಜನೆ ಉದ್ದೇಶ ನೂರರಷ್ಟು ಯಶಸ್ವಿಗೊಳ್ಳಲಿದೆ.
ಮಹತ್ವಾಕಾಂಕ್ಷೆಯ ಜಲ ಜೀವನ್ ಮಿಷನ್ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ ನಿರ್ವಾಣಕ್ಕೆ ಒತ್ತು ನೀಡಲಿದೆ, ಗ್ರಾಮಗಳಲ್ಲಿ ನೀರಿನ ಸಂಪರ್ಕ ಕಲ್ಪಿಸಲು ನಲ್ಲಿ ಅಳವಡಿಕೆ, ಬಿಟ್ಟು ಹೋಗಿರುವ ಮನೆಗಳಿಗೆ ನಲ್ಲಿ ಸಂಪರ್ಕವು ಪೂರ್ಣ ಪ್ರವಾಣದಲ್ಲಿ ಅನುಷ್ಠಾನಗೊಳ್ಳಲಿದೆ. ಜಿಲ್ಲೆಯಲ್ಲಿ ನಿರ್ಮಿಸಿರುವ ಎಲ್ಲ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಿ, ಮನೆ ಮನೆಗೂ ನೀರು ಸರಬರಾಜು ವಾಡಲಿದೆ. ರಿಪೇರಿಗೆ ಬಂದಿರುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ದುರಸ್ತಿ ಭಾಗ್ಯ ಸಿಗಲಿದೆ.
ಎಲ್ಲ ಓವರ್ ಹೆಡ್ ಟ್ಯಾಂಕ್‌ಗಳ ಬಳಿ ಸಂಪ್ ನಿರ್ಮಿಸಿ, ಆ ಮೂಲಕ ಸ್ವಚ್ಛತೆ ಕಾಪಾಡಿ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ವಿಫಲ ಕೊಳವೆ ಬಾವಿಗಳ ಸ್ಥಿತಿಗತಿ ಕುರಿತು ಅವಲೋಕಿಸಿದ್ದು, ವಿಫಲಗೊಂಡ ಕೊಳವೆ ಬಾವಿಗಳ ಪಂಪ್, ಮೋಟಾರ್, ಕೇಬಲ್ ಸೇರಿ ಇತರ ಸಲಕರಣೆಗಳ ವಾಹಿತಿ ಕಲೆಹಾಕಲಿದೆ. ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಒದಗಿಸಲು ಪೈಪ್ ಲೈನ್ ಅಳವಡಿಕೆ ಪೂರ್ಣಗೊಂಡಿರುವ ಗ್ರಾಮಗಳಲ್ಲಿ ಬಿಟ್ಟು ಹೋಗಿರುವ ಮನೆಗಳಿಗೆ ಪೈಪ್‌ಲೈನ್ ಅಳವಡಿಸಿ ನಲ್ಲಿ ಸಂಪರ್ಕಿಸುವ ಕಾರ್ಯ ನಡೆಯಲಿದೆ.
ಪಾವಗಡ, ಸಿ.ಎನ್.ಹಳ್ಳಿಗೆ ಬಂಪರ್ ಕೊಡುಗೆ: ‘ಜಲ ಜೀವನ್ ಮಿಷನ್’ ಯೋಜನೆಯ ಸಂಪೂರ್ಣ ಲಾಭವನ್ನು ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಎಲ್ಲ ಗ್ರಾಮಗಳು ಪಡೆದುಕೊಳ್ಳಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಯೋಜನೆಯ ಲಾಭ ಸಿಗಲಿದೆ.
ಪಾವಗಡಕ್ಕೆ ಭದ್ರಾಮೇಲದಂಡೆ ಯೋಜನೆ ನೀರು, ಚಿಕ್ಕನಾಯಕನಹಳ್ಳಿಯಲ್ಲಿ ಬೋರನಕಣಿವೆ ಜಲಾಶಯದ ನೀರು ಬಳಸಿಕೊಳ್ಳಲಿದೆ, ತಿಪಟೂರು ತಾಲೂಕಿನ ಎಲ್ಲ ಗ್ರಾಮಗಳಿಗೂ ಗೊರೂರು ಜಲಾಶಯದ ನೀರು ಪಡೆಯುವ ಚಿಂತನೆ ನಡೆದಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ಚಾಲ್ತಿಯಿರುವ ಗ್ರಾಮಗಳಲ್ಲಿ ಈ ಯೋಜನೆ ಶೀಘ್ರದಲ್ಲಿಯೇ ಸಾಕಾರವಾಗಲಿದೆ.
‘ಜಲ ಜೀವನ್ ಮಿಷನ್’ ಯೋಜನೆ ಜಿಲ್ಲೆಯಲ್ಲಿ ಎಲ್ಲ ಮನೆಗಳಿಗೂ ಕುಡಿಯುವ ನೀರು ಒದಗಿಸಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಗ್ರಾಮ ಕ್ರಿಯಾಯೋಜನೆ ಸಿದ್ಧವಾಗಲಿದೆ. 3ನೇ ಹಂತದಲ್ಲಿ 3012 ವಸತಿ ಪ್ರದೇಶಕ್ಕೆ 991 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಡಾ.ಕೆ.ವಿದ್ಯಾಕುಮಾರಿ ಜಿಪಂ ಸಿಇಒ