ನಂಚಾರು ಶಾಲೆಯಲ್ಲಿ ಧನಸಹಾಯ ವಿತರಣೆ

protsahadhana
ನಂಚಾರು ಶಾಲೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
Published on

ಕೊಕ್ಕರ್ಣೆ: ನಂಚಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಐದನೇ ತರಗತಿಯಲ್ಲಿ ಗರಿಷ್ಠ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ದಾನಿ ಸುರೇಶ್ ಶೆಟ್ಟಿ ಸಪ್ತಬೆಳರು ನಂಚಾರು ಕೊಡಮಾಡುವ ಪ್ರೋತ್ಸಾಹಧನ ವಿತರಿಸಿಲಾಯಿತು.

ನಂಚಾರು ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಅರ್ಚಕ ಲಕ್ಷ್ಮೀನಾರಾಯಣ ಅಡಿಗ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಆಚಾರ್ಯ, ಉಪಾಧ್ಯಕ್ಷೆ ಶೋಭಾ, ನಾಲ್ಕೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ಪೂಜಾರಿ, ಸುಮಿತ್ರಾ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಮಮೂರ್ತಿ ಅಡಿಗ, ಸ್ಥಳೀಯರಾದ ರತ್ನಾಕರ ಶೆಟ್ಟಿ, ಶರತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಮುಖ್ಯ ಶಿಕ್ಷಕಿ ದೀಪಾ ಶೆಟ್ಟಿ, ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net